ಗಿರಿಜಾ ಶಾಸ್ತ್ರಿ ಅಮೆರಿಕಾದಿಂದ ಕೇಳಿದ್ದು ಹೀಗೆ-
ಅಮೇರಿಕಾದ ಸೂಪರ್ ಬಜಾರಿಗೆ ಹೋದಾಗಲೆಲ್ಲ ಎ.ಕೆ. ರಾಮಾನುಜನ್ ನೆನಪಾಗುತ್ತಾರೆ.
ನಿನ್ನೆ ವಾಕಿಂಗ್ ಹೋಗುತ್ತಿರುವಾಗ ರಸ್ತೆ ಬದಿಯಲ್ಲಿ ಕೂಡ ನೆನಪಾದರು.
ಯಾರೋ ಮಕ್ಕಳು ಕುಂಟೋಬಿಲ್ಲೆ ಚಿತ್ರವನ್ನು ಸೀಮೇ ಸುಣ್ಣದಲ್ಲಿ ಬರೆದಿದ್ದರು.
ನಾನು ಬಾಲ್ಯದ ನೆನಪಾಗಿ ಎರಡು ಮನೆ ಕುಂಟುತ್ತಾ ಆಟವಾಡಿದೆ. ಮಕ್ಕಳ ಜೊತೆಗೆ ಅಲ್ಲೇ ನಿಂತಿದ್ದ ಒಬ್ಬ ಮಹಿಳೆ ನನ್ನನ್ನು ನೋಡಿ “do you know this game? ಎಂದಳು. ನಾವು ಬಾಲ್ಯದಲ್ಲಿ ಆಡುತ್ತಿದ್ದ ಆಟವಿದು ಎಂದು ಅವಳಿಗೆ ಹೇಳಿದೆ. Oh it is all over the world! Yes it is Hopscotch! ಎಂದು ಉದ್ಗಾರ ತೆಗೆದಳು. ಇಬ್ಬರೂ ಮನಸಾರೆ ನಕ್ಕೆವು.
ಈ ಆಟ ಆಡುವಾಗ ಕಣ್ಣು ಮುಚ್ಚಿಕೊಂಡು ಆಕಾಶ ನೋಡುತ್ತಾ ಗೆರೆಯ ಮೇಲೆ ಕಾಲಿಟ್ಟಿಲ್ಲವೆಂದು ಖಚಿತ ಪಡಿಸಿಕೊಳ್ಳಲು ಅಮಟೆ ಅಮಟೆ ಎನ್ನುತ್ತಿದ್ದೆವು. ಅದು am I right ? ಎನ್ನುವ ಅಪಭ್ರಂಶವೆಂದು ಗೊತ್ತಾಗಿದ್ದು ಆಮೇಲೆ.
ಈ ಆಟ ನಮಗೆ ಬಹುಶಃ ಇಂಗ್ಲಿಷ್ ರಿಂದಲೇ ಬಂದಿರಬೇಕು.
ಯಾರಾದರೂ ಎ.ಕೆ ಆರ್ ಅವರ ಈ ಕವಿತೆ ಹಾಕಿದರೆ ಉಪಕಾರವಾಗುತ್ತದೆ.
ತಕ್ಷಣ ಎಲ್ ಸಿ ಸುಮಿತ್ರಾ ತೀರ್ಥಹಳ್ಳಿಯಿಂದ
ಕವಿತೆ ಕಳಿಸಿಯೇ ಬಿಟ್ಟರು-


ಬೆಂಗಳೂರಿನಿಂದ ರೇಣುಕಾ ಮಂಜುನಾಥ್ ಈ ಚಿತ್ರ ಹಂಚಿಕೊಂಡು
ನೆನಪು ಬಿಚ್ಚಿಟ್ಟರು –

ನಾವು ಆಡುತ್ತಿದ್ದುದು ಹೀಗೆ ಅಲ್ಲವೆ? ಅದೆಷ್ಟು ಒಳ್ಳೆಯ ವ್ಯಾಯಾಮ ಅದಾಗಿತ್ತು?
ಗಿರಿಜಾ, ಈ ಫೇಸ್ ಬುಕ್ ಇಲ್ಲದಿದ್ದರೆ ಹೀಗೆ ಅಂದಂದಿನ ಅನುಭವ , ಗ್ರಹಿಕೆ, ಅನಿಸಿಕೆ ಹಾಕಲು ಪ್ರೇರಣೆ ವೇದಿಕೆ ಇರುತ್ತಿತ್ತೆ?.
ಗಿರಿಜಾ ಶಾಸ್ತ್ರಿ ಈ ಚಿತ್ರ ಕೊಟ್ಟು ಆಟದ ಇನ್ನೊಂದು ಬಗೆ ತೆರೆದಿಟ್ಟರು..

ಬಿ ಯು ಗೀತಾ ಅವರು ತಮ್ಮ ನೆನಪು ಬಣ್ಣಿಸಿದ್ದು ಹೀಗೆ-
ನನ್ನದೊಂದು ಕಥೆಯಲ್ಲಿ ಸೇತುರಾಂ ಅವರ ಸೀರಿಯಲ್ ಸಂಭಾಷಣೆಯನ್ನು ಬಳಸಿಕೊಂಡಿದ್ದು.

ಶ್ರೀಧರ ಬಾಣಾವರ ತಮ್ಮ ಅದೃಷ್ಟ ಹೀಗಿತ್ತು ಎಂದರು..
ಬೆಂಗಳೂರಿನ ಏರ್‌ಪೋರ್ಟ್ ಡಿಪಾರ್ಚರ್ ಲೋಂಜ್‌ನಲ್ಲಿ ನೆಲದ ಮೇಲೆ ಒಂದು ಕುಂಟಬಿಲ್ಲೆ ಚಿತ್ರ ಪೆಯಿಂಟ್ ಮಾಡಿದಾರೆ. ಕಳೆದ ತಿಂಗಳಲ್ಲಿ ರಾತ್ರಿ ಅಲ್ಲಿ ೪-೫ ಗಂಟೆ ಕಾಯಬೇಕಾದಾಗ ನನ್ನ ೬ ವರ್ಷದ ಮೊಮ್ಮಗಳು ಇದರ ಸಹಾಯದಿಂದ ಸಂತೋಷದಿಂದ ಸ್ವಲ್ಪಕಾಲ ಕಳೆದದ್ದು ನಮ್ಮ ಅದೃಷ್ಟ.






ತುಂಬಾ ಚೆನ್ನಾಗಿದೆ