ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಕಳಶಕ್ಕೆ 11 ಕೋಟಿ..??

 

 

 

 

ರವಿ ಅರೇಹಳ್ಳಿ 

 

 

 

ಒಂದು ಕಳಶಕ್ಕೆ 11 ಕೋಟಿ ಕೊಟ್ಟು ಅಭಿಷೇಕಕ್ಕೆ ಮೊದಲು ನಿಲ್ಲುವವನಿಗೆ ಆಸ್ಪತ್ರೆಯೋ ಶಾಲೆಯೋ ಕಟ್ಟುತ್ತೇವೆಂದರೆ ಅಷ್ಟು ಕೊಡಲು ಮನಸ್ಸು ಬರುವುದು ಕಡಿಮೆ..

ಕೊಟ್ಟರೂ ಅಷ್ಟು ಉದಾರಿಯಾಗಲಾರ.

ಒಬ್ಬ ಒಳ್ಳೆಯ ಮನಸ್ಸಿನ ಮಧ್ಯವರ್ತಿ ದೇವರ ಹೆಸರಿನಲ್ಲೋ, ಉತ್ಸವದ ಹೆಸರಿನಲ್ಲೋ ಉಳ್ಳವನನ್ನು ಓಲೈಸಿ ಆತನಿಂದ ಪಡೆದು ಶಾಲೆಗೋ, ಆಸ್ಪತ್ರೆಗೋ ಕೊಡಬೇಕಾದ ಪರಿಸ್ಥಿತಿ ನಮ್ಮಲ್ಲಿ ಯಾವತ್ತಿನಿಂದಲೂ ಇದೆ.

ಮನುಷ್ಯನ ಅಹಂ ತಣಿಸಿಕೊಳ್ಳಲು ಮಾಡುವ ಸಣ್ಣ ಅಥವ ದೊಡ್ಡ ಖರ್ಚಿಗೆ ಪ್ರತಿಯಾಗಿ ಸಿಗುವುದು ಜನಸಮೂಹದ ನಡುವಿನ ತತ್ಕಾಲದ ಹೆಗ್ಗಳಿಕೆಯ ನಾಲ್ಕು ಮಾತುಗಳು. ಇಲ್ಲಿ ಗೆದ್ದವನಿಂದ ಹೆಚ್ಚು ಹಣ ಕೈಬಿಡುತ್ತದೆ. Once again ಇದು ಉಳ್ಳವರ ಮೇಲಾಟದ ಪಣಕ್ಕೆ ಒಡ್ಡಿದ ಹಣವೇ .

ಇದನ್ನೇ Charity ಎನ್ನುವುದಾದರೆ ಅರ್ಧ ಆಸ್ತಿಯನ್ನೇ ದಾನ ಮಾಡುವುದನ್ನು ಏನೆಂದು ಕರೆಯಬೇಕು..

‍ಲೇಖಕರು avadhi

19 February, 2018

2 Comments

  1. Padmaraj Saptasagar

    ಒಂದು ಒಳ್ಳೆಯ ವಿಷಯವೆಂದರೆ ಸ್ವಾಮೀಜಿ ಹೇಳಿದ ಪ್ರಕಾರ ಕಲಾಶದಿಂದ ಬರುವ ದುಡ್ಡೇಲ್ಲವೂ 200 ಬೆಡ್ ಆಸ್ಪತ್ರೆಗೆ ಬಳಕೆ ಆಗುತ್ತದೆ ಎಂದು

  2. Sangeeta Kalmane

    ಇರಲಿ, ಹೀಗಾದರೂ ಉಳ್ಳವರ ದುಡ್ಡು ಹೊರಗೆ ಬರಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading