ಸಂದೀಪ್ ಈಶಾನ್ಯ
ಗೋಡೆಯ ಆ ಬದಿಗೆ ನಿಂತು
ಪಿಸುನುಡಿದ ನಿನ್ನ ಮಾತುಗಳೆಲ್ಲಾ
ಈಗ ಎಷ್ಟು ಹಪಹಪಿಸಿದರು ಅರ್ಥೈಸಿಕೊಳ್ಳಲಾರದೆ ಹೆಣಗಾಡಿಸುವ
ಅಸ್ಪಷ್ಟ ಕವಿತೆ
ಕಡಲಿನೊಳಗೆ ಚಲಿಸುವಾಗ ಜೀಕಾಡುವ ತೂಗೂಯ್ಯಾಲೆಯಂತೆ
ನೀನು ಸಾಧ್ಯವಾದಷ್ಟು ದೂರಕ್ಕೆ ಮುಂದುವರಿಯುವಾಗ
ದಿನಪೂರ ಅಬ್ಬರಿಸಿ ಅಪ್ಪಳಿಸಿದ
ಅಲೆಗಳ ರಭಸಕ್ಕೆ ಬಿರುಕುಬಿಟ್ಟ ದಡದಲ್ಲೇ ಗೂಡು
ಕಟ್ಟಿದ್ದ ರೆಕ್ಕೆಯಿರದ ಹಸಿರು ಮಿಡತೆ
ನೂರಾರು ಶಿಖರಗಳನ್ನು ಬರಿಗಾಲಿನಲ್ಲೇ
ಹತ್ತಿಳಿದ ಪರ್ವತಾರೋಹಿಯೆಂದು ಬೀಗುತ್ತಿದ್ದವನು
ಒಂದೀಡಿ ರಾತ್ರಿ ತಿಣುಕಿದರೂ ಮಂಜಿನಗುಡ್ಡೆಯಂತ
ನಿನ್ನ ಪುಟಾಣಿ ಮೊಲೆಗಳನ್ನು ಮಾತ್ರ ದಾಟಿ
ನಿನ್ನ ತಲುಪಲಾರದೆ ಹೋದೆ
ಗೂಡಿರದ ಮಿಡತೆ ನರಳುವಂತೆ
ನಿನ್ನೊಗಳನ್ನ ಮುಟ್ಟಲಾರದ ನಾನೂ ಮಿಸುಕಾಡುತ್ತಿದ್ದೇನೆ
ತಾಯ್ತನವನ್ನೂ ಬಚ್ಚಿಟ್ಟುಕೊಂಡಿರುವ
ನಿನ್ನ ಮೊಲೆಗಳ ನೀನೇ
ಅನುಭವಿಸಿ ಒಪ್ಪಿಸಿಕೊಂಡರಷ್ಟೇ ಶುದ್ಧ ಪ್ರೇಮದ ಲಾಂಛನ
ಅತಿಕ್ರಮಿಸಿದರೆ ಅದು ಬರೀ ಹಿಡಿಯಷ್ಟಿರುವ ತೊಗಲಿನ ಮೂಟೆ
ಅಪರಿಮಿತ ನಿನ್ನ ಮೈ ಕಾವಿಗೆ ಕಳಚಿಬಿದ್ದ
ಮುಖವಾಡದಲ್ಲಿ ಇದೀಗ
ಈ ಹಿಂದೆ ಬಳಿದುಕೊಂಡಿದ್ದ
ಅಷ್ಟೂ ಬಣ್ಣಗಳು ಪಕಳೆಗಳಾಗಿ ಉದುರುತ್ತಿವೆ
ಕಾಲಕ್ಕನುಗುಣವಾಗಿ ಬಳಿದುಕೊಂಡಿದ್ದ ಬಣ್ಣಗಳು
ಅವು
ಕಡಲು ಮತ್ತೆ ಭೋರ್ಗರೆದು ಅಪ್ಪಳಿಸಲಿ
ದಡದಲ್ಲೀಗ ಮತ್ತೊಂದು ಹಸಿರು ಮಿಡತೆ
ಕಣ್ಣು ಚಾಚುತ್ತ ಶಿಖರಗಳ ಅಳೆಯುವ ಹುಂಬನ ದೃಷ್ಟಿಕೋನಕ್ಕೀಗ
ಒಂದು ವಿರಾಮ
ನಿನಗೆ ನಿಟ್ಟುಸಿರ ಬಿಡುವು
ಆಪ್ತ ನಗುವೊಂದು ಅಪರಿಚಿತವಾದಾಗ
ಅನಿತಾ ಪಿ. ತಾಕೊಡೆ ** ಅದುರುವ ರೆಪ್ಪೆಯೊಳಗಿನ ಕಣ್ಣ ಬಿಂಬದಲಿಕಂಡೂ ಕಾಣದಂತಿರುವ ನಿನ್ನೆಗಳು ಕೂಡಿಕೊಂಡುಇರುಳ ಮರೆಯಲಿರುವ ಛಾಯೆಗೆ ಬಣ್ಣ...
0 Comments