ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏಕೆ ಹೀಗೆ…?

ಅದೇಕೋ ಗೊತ್ತಿಲ್ಲ… – ಕೆ.ಎಸ್.ಅಪ್ಪಣ್ಣ

ಅದೇಕೋ ಗೊತ್ತಿಲ್ಲ…

ಉಳಿದ ದಿನಗಳಲ್ಲಿ ಸಾಲದೆನಿಸುವ ಸಕ್ಕರೆ ನಿದ್ದೆ

ರಜೆಯ ದಿನದಲ್ಲಿ ಬೆಳ್ಳಂ ಬೆಳಗ್ಗೇ ಕೈ ಕೊಡುತ್ತದೆ.

 

ಅದೇಕೋ ಗೊತ್ತಿಲ್ಲ..

ಬೇಡವಾಗಿದ್ದಾಗ ಕಾಲಿಗೇ ತೊಡರುವ ವಸ್ತು..

ಹುಡುಕುವಾಗ ಮಾತ್ರ ಸಿಗುವುದೇ ಇಲ್ಲ..

 

ಅದೇಕೋ ಗೊತ್ತಿಲ್ಲ..

ಯಾರಿಲ್ಲವೆಂದು ಅಳುವ ಅದೇ ಮನಸು..

ಎಲ್ಲರೂ ಇರುವಾಗ ಏಕಾಂತ ಬಯಸಿ ಅಳುತ್ತದೆ.

 

ಅದೇಕೋ ಗೊತ್ತಿಲ್ಲ ,

ಮದುವೆಯಾಗುವ ತನಕ ಪ್ರೀತಿಗಾಗಿ ಜೀವವನ್ನೇ ಕೊಡುವವರು

ಆಮೇಲೆ ಪ್ರೀತಿಸುವುದನ್ನೇ ಮರೆತುಬಿಡುತ್ತಾರೆ.

 

ಅದೇಕೋ ಗೊತ್ತಿಲ್ಲ..

ಚಿಕ್ಕವರಾಗಿದ್ದಾಗ ಬೇಗನೆ ದೊಡ್ಡವರಾಗಬೇಕೆನಿಸುತ್ತದೆ..

ಆಮೇಲೆ ಬಾಲ್ಯಕ್ಕೇ ಮರಳಬೇಕೆನಿಸುತ್ತದೆ.

 

ಅದೇಕೋ ಗೊತ್ತಿಲ್ಲ

ಕೈಲಿದ್ದ ವಸ್ತು ಕಳೆದುಹೋಗುವ ತನಕ

ಅದರ ಬೆಲೆಯೇ ತಿಳಿಯುವುದಿಲ್ಲ

 

ಅದೇಕೋ ಗೊತ್ತಿಲ್ಲ,

ಬೇಡವೆಂದರೂ ಹಳೆಯ ಪ್ರೇಮ ನೆನಪಲ್ಲುಳಿಯುತ್ತದೆ..

ಅದೇ ಬೇಕೆಂದರೂ ಪರೀಕ್ಷೆಯಲ್ಲಿ ನೆನಪು ಕೈಕೊಡುತ್ತದೆ.

 

ಅದೇಕೋ ಗೊತ್ತಿಲ್ಲ..

ಅವಳ ನಂಬರು ನೆನಪಲ್ಲಿರುವ ಹಾಗೆ..

ಹಿಷ್ಟರಿಯ ತೇದಿ ನೆನಪಲ್ಲುಳಿಯುವುದಿಲ್ಲ..

 

ಅದೇಕೋ ಗೊತ್ತಿಲ್ಲ….

 

 ]]>

‍ಲೇಖಕರು G

12 July, 2012

3 Comments

  1. Swarna

    nice

  2. D.RAVI VARMA

    ಅದೇಕೋ ಗೊತ್ತಿಲ್ಲ..
    ಅವಳ ನಂಬರು ನೆನಪಲ್ಲಿರುವ ಹಾಗೆ..
    ಹಿಷ್ಟರಿಯ ತೇದಿ ನೆನಪಲ್ಲುಳಿಯುವುದಿಲ್ಲ..
    ನಿಮಗೆ history ಯ ತೇದಿ ನೆನಪುಳಿಯುವುದಿಲ್ಲ
    ಆದರೆ ,
    ಅದೇಕೋ ಹಾಗೆ ,
    ಆಕೆಯ ನೆನಪು ಬಂದರೆ ,
    ನನ್ನನ್ನೇ ನಾನು ,
    ಕಳೆದುಕೊಳ್ಳುತ್ತೇನೆ ,
    ನನ್ನನ್ನೇ ನಾನು ,
    ಮರೆತು ಹೋಗುತ್ತೇನೆ ,
    ಇದು ಯಾವ ಮಾಯಾ ‘……..
    ಆ ಗೊಂದಲದಲ್ಲೇ ,
    ಇದ್ದು ಇಲ್ಲದಂತಿದ್ದೇನೆ .
    ರವಿ ವರ್ಮ ಹೊಸಪೇಟೆ

  3. SunilHH

    Super 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading