ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಏಕೆಂದರೆ ನೋವಿಗೆ ಉಗುರಿಲ್ಲ…..' ಪ್ರಜ್ಞಾ ಮತ್ತಿಹಳ್ಳಿ

ನೋವು ಮತ್ತು ಉಗುರು

ಪ್ರಜ್ಞಾ ಮತ್ತಿಹಳ್ಳಿ


ನೋವುಗಳೆಲ್ಲ ಜಾಗ ಬೇಡುತ್ತಿದ್ದವು
ಹೊರಳಾಡಲು ವಿಲಿವಿಲಿ
ಒದ್ದಾಡಲು ಮತ್ತು
ಗೋಳಾಡಲು ಅವುಗಳದ್ದೇ
ಆದ ಅವಕಾಶ ಕೇಳುತ್ತಿದ್ದವು
ಗಂಡ ಮೈ ಸುಟ್ಟ ಹೊಟ್ಟೆಯ
ಮಕ್ಕಳೇ ಹೊರಗಟ್ಟಿದ
ಅಪ್ಪನ ತೆವಲಿಗೆ ಬಸಿರುಗಟ್ಟಿದ
ಗುಂಪು ಹರಿದು ಮುಕ್ಕಿದ
ಹೆಂಡತಿಯ ಪ್ರೇಮಿ ಇರಿದು
ಕೊಂದ ನೂರಾರು ಸಾವಿರಾರು
ನೋವುಗಳು ತಾವು ಕೇಳುತ್ತಿದ್ದವು
ಹೀಗೆ ತೆವಳಿ ಬಂದ ನೋವುಗಳ
ಅಳೆದರು ಟೇಪು ಹಿಡಿದು
ತೂಗಿದರು ಬಗೆಬಗೆ
ತಕ್ಕಡಿಗಳಲ್ಲಿಟ್ಟು ತಕ್ಕ
ಗುಂಪಿಗೆ ನೊಂದಾಯಿಸಿ
ನಿಯಮಾನುಸಾರ ಕೊಟ್ಟರು
ಪ್ರತ್ಯೇಕ ಬಾಟಲಿಗಳ
ಎಲ್ಲ ಬಾಟಲಿಗೂ
ಹೆಸರು ಜಾತಿಯ ಬಣ್ಣದ
ಹನಿಗಳ ಸೇರಿಸಿ ಬಿರಡೆ ಮುಚ್ಚಿ
ಗುರುತಿಗೆ ಅಂಟಿಸಿದರು ಲೇಬಲ್ಲು
ಮುಲುಗತೊಡಗಿದವು
ನೋವುಗಳು ಅವುಗಳದೇ
ತೀವ್ರ ಕಂಪನ ವಿಸ್ತಾರದಲಿ
ಉಬ್ಬರಿಸಿದವು ಗಾಜು
ಗಿರಿಗಿರಿ ತಿರುಗಿ ತಿರೆಯಾಯಿತು
ಬಿರಡೆ ಗುಡುಗುಡಿಸಿ ಬಾನಿಗೆಸೆಯಿತು
ಬಣ್ಣ ಬುಳುಬುಳು ಹೊಳೆಯಾಯಿತು
ಹರಿಯದೇ ಹಾಗೇ ಉಳಿಯಿತು
ಲೇಬಲ್ಲು ಏಕೆಂದರೆ
ನೋವಿಗೆ ಉಗುರಿಲ್ಲ
 
 

‍ಲೇಖಕರು avadhi-sandhyarani

7 February, 2013

1 Comment

  1. jagannatha R N

    uttama saalugalu…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading