ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಸ್ ಜಿ ಸಿದ್ದರಾಮಯ್ಯ ಹೊಸ ಕವಿತೆ- ನಿಲ್ಲಲಿ ಯುದ್ದ…

ಎಸ್ ಜಿ ಸಿದ್ದರಾಮಯ್ಯ

ಉಕ್ರೇನಿನ ರಣರಂಗದ ಬೀದಿಯಲ್ಲಿ
ಮುರಿದು ಬಿದ್ದ ಮನೆಯ ಒಳಗೆ
ಅರಚುತ್ತಿದೆ ಒಂದೇಸಮ ಮಗುವೊಂದು

ಕೇಳುವ ಕಿವಿಗಳು ಸತ್ತಿವೆ ಸುತ್ತಲೆಲ್ಲ
ಬಾಂಬಿನ ಸದ್ದು ಗುಂಡಿನ ಸದ್ದು ಬೇರೇನಿಲ್ಲ
ಅರಚುತ್ತಿದೆ ಒಂದೇಸಮ ಮಗುವೊಂದು

ಭಾರತದ ಮನೆ ಮನೆಗಳ ಒಳಗೂ
ಟಿವಿಯಲ್ಲಿ ಬಾಂಬಿನ ಶಬ್ದವ ಕೇಳುತ ಕಾಣುತ
ಸಂಭ್ರಮಿಸುತ್ತಿವೆ ಕೆಲ ಮಕ್ಕಳು ಪಟಾಕಿ ಹಬ್ಬದ ಉಲ್ಲಾಸ.

ಉಕ್ರೇನಿನ ರಣರಂಗದ ಬೀದಿಯ ಮಗುವಿನ
ಅರಚುವ ಮೊರೆಯು ಬಳೆದಿದೆ ದಿಗಂತದಾಚೆಗೆ‌
ಜಗದೆಲ್ಲ ತಾಯಂದಿರ ಎದೆಹಾಲು ಹರಿದಿದೆ

ಉಕ್ರೇನಿನ ಕಡೆ ಉಕ್ರೇನಿನ ಕಡೆ ಹೊಳೆಯಾಗಿ
ನಿಲ್ಲಲಿ ಯುದ್ದ ನಿಲ್ಲಲಿ ಯುದ್ದ ನೆಲೆಗೊಳ್ಳಲಿ ಶಾಂತಿ.

‍ಲೇಖಕರು Admin

10 March, 2022

1 Comment

  1. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading