ಗಾಯದ ಹೂಗಳು
ಕಾಜೂರು ಸತೀಶ್
ಗಾಯಗಳು ಹಾಡಬೇಕು ಕೆಂಪು ಹೂಗಳಾಗಿ;
ಒಸರುವ ಅಷ್ಟೂ ರಕ್ತ ಹೂವಿಗೆ
ಅಂದ ನೀಡಬೇಕು.
ಮಿದುಳಿಗೊಯ್ಯಬೇಕು ಪರಾಗಗಳ ಅಲೆಅಲೆಯಾಗಿ ಅಲೆಯುವ ಹುಳುಗಳು ಬರಿಯ ಪಾದಗಳಲ್ಲಿ;
ಗರ್ಭಕಟ್ಟಿದ ಮೇಲೆ ಕಳ್ಳುಬಳ್ಳಿಗಳನ್ನು ಬಾಂಬುಗಳಿಂದಲೂ ಸಿಡಿಸಲಸಾಧ್ಯವಾಗಬೇಕು.
ಕರಕಲಾಗಬಾರದು ಹೀರುವ ಯಾವ ದುಂಬಿಗಳೂ ಸುಟ್ಟು;
ಹೀರಿದ್ದು ಮೀರಿದರೆ ಅವೂ ಕೆಂಪುಹೂಗಳಾಗಿ ಹಾರಿಹೋಗಬೇಕು.
ಬಣ್ಣ ಮುಗಿದಿದ್ದರೆ ಓಡಿಬರಬೇಕು ಕಲಾವಿದ- ಕತ್ತಿಯ ಕುಂಚ ಎಸೆದು;
ಗಾಯದ ಹೂಗಳು ಕಣ್ಣೊಳಗೂ ಇಳಿದು ಅವನ ಕಣ್ಣುಗಳೂ ಹೂವಾಗಬೇಕು.
ಬಿಳಿಹೂವಾಗಬೇಕು ಚರಿತ್ರೆಗುಡ್ಡದಲ್ಲಿ -ಹೊರಬರುತ್ತಿದ್ದರೆ ಗಾಯದ ಕೀವು;
ಹುಳುಹತ್ತಿದರೆ ಅವುಗಳ ಹಸಿದ ಹೊಟ್ಟೆಗೆ ಕೀವು ಜೇನಾಗಬೇಕು.
ಎಲ್ಲ ಗಾಯಗಳೂ ಹೂವಾಗಬೇಕು
ನನ್ನ-ನಿಮ್ಮ ಹೃದಯಗಳಲ್ಲಿ.







ಆಶಯ ದೊಡ್ಡದು ಸತೀಶ್…ಕವಿತೆ ಚೆನ್ನಾಗಿದೆ.
Indhu, ninneyadalla, shathamanagala ‘ashaya’. matthe, matthe, marukalisuthale idhe, nimmanthavara kavithegalalli.
ತುಂಬ ಚೆನ್ನಾಗಿದೆ ಕವಿತೆ
ಕವಿಗಳು ‘ದೃಷ್ಟಾರ’ರೆನಿಸಿಕೊಳ್ಳುವುದು ಬಹುಶಃ ಇಂತಹ ಆಶಯ ಇರುವ ಕವಿತೆಗಳಿಂದಲೇ 🙂
nice
ಚೆನ್ನಾದ,ಚಿಂತನೀಯ ಕವಿತೆ!
Thank you all..
nice.. tumba ishtavaayitu..
ಅದ್ಭುತ ಕವಿತೆ…ಸರ್…!
Nice..ella gaayagalu anno nim kavithe tumba istavaayithu sir..