ಒಂದು ಕವಿತೆ
ಸ್ವರ್ಣ ಎನ್ ಪಿ
ಹಾಗೇ ಕುಳಿತು ಯೋಚಿಸುತ್ತೇನೆ ನಾನು
ನನಗೇನು ಕೊಟ್ಟೆ ನೀನು ?
.
ಸರಿ ರಾತ್ರಿಯ ಸೀಳಿ ಬರುವ ಬೀದಿ ನಾಯಿಯ
ಬೆಚ್ಚಿ ಬೀಳಿಸುವ ಆಕ್ರಂದನ
ನನ್ನ ದನಿ ಪೆಟ್ಟಿಗೆ ಮೂಕವಾಗಿದೆ
.
ಗೋಡೆಯ ಸೀಮೆಂಟಿನ ತುದಿಯ ಮರಳ ಕಣಕೆ ಜೋತು
ಬಿದ್ದ ರೇಷ್ಮೆ ಸೀರೆಯ ಚುಂಗು
ನನ್ನ ಸ್ಪರ್ಶ ಸತ್ತಿದೆ
.
ಎಲ್ಲೆಲ್ಲೂ ಹರಡುವ ಹೊಸ ಹುಲ್ಲಿನ ಪೊರಕೆಯ
ನಯಸಾದ ಕಣಗಳು
ನನ್ನ ನೆನಪುಗಳು ಮರೆಯುತ್ತಿಲ್ಲ
.
ಇರುವ ಹುಡುಕುತ್ತಾ ಸೀಮೆಯಿಂದ ಸೀಮೆ ಅಲೆವ
ಅಲೆಮಾರಿ ಬಕ ಪಕ್ಷಿ
ನನ್ನ ಹಾರಾಟಕ್ಕೆ ಆಕಾಶವೇ ಎಲ್ಲೆ
ಐದಿಂದ್ರಿಯಗಳ ಕೊಂದ ದೋಷ ನನಗಿರಲಿ
ಇರುವ ಹರಿವ ವಿಶಾಲವಾಗಿಸಿದ ಕೀರ್ತಿ ನಿನಗಿರಲಿ






0 Comments