ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲರೊಳಗೂ ಇದ್ದಾರೆ ಒಬ್ಬ ಬುದ್ದ, ಒಬ್ಬ ಅಂಗುಲೀಮಾಲ

ಎಲ್ಲರೊಳಗೂ ಇದ್ದಾರೆ… – ಕೆ.ಎಸ್. ಅಪ್ಪಣ್ಣ

ಎಲ್ಲರೊಳಗೂ ಇದ್ದಾರೆ… ಒಬ್ಬ ಬುದ್ದ, ಒಬ್ಬ ಅಂಗುಲೀಮಾಲ, ಒಬ್ಬ ಸಂತ,ಒಬ್ಬ ಸೂಫಿ, ಒಬ್ಬ ಹುಚ್ಚ, ಒಬ್ಬ ಫಕೀರ, ಒಬ್ಬ ರಾಮ,ಒಬ್ಬ ರಾವಣ …ಎಲ್ಲ ,ಎಲ್ಲಾ.. ನಿನ್ನೊಳಗಷ್ಟೇ ಅಲ್ಲ.. ನನ್ನೊಳಗೂ . ಅಸಲು…ಎಲ್ಲರೊಳಗೂ .. ಹಾಗಾಗಿ.. ಗೊಂದಲಕೆ ಬೀಳದಿರು ಗೆಳೆಯಾ.. ಒಂದಷ್ಟೇ ನೆನಪಿಡು ಸಾಕು. ಇವರ್ಯಾರೂ ನಿರಂತರರಲ್ಲ!! ಯಾರೂ ಒಬ್ಬೇ ಒಬ್ಬರಾಗಿ ಕಡೆತನಕ ನಿನ್ನ ಆಳುವುದಿಲ್ಲ.!!. ಬಾಳಿನೀ ನಿಗೂಢ ಪಯಣದಲಿ.. ಒಳಗೆಲ್ಲೋ ಅವಿತು ಕುಳಿತಿರುವಿವರು. ಬೇಕಾದಾಗಷ್ಟೇ ಬಯಲಾಗುತ್ತಾರೆ.. ಪಕ್ಕಾ ಸಮಯಸಾಧಕರಂತೆ.. ಇದ್ದಕ್ಕಿದ್ದಂತೇ ಪ್ರಕಟಗೊಳ್ಳುತ್ತಾರೆ .. ನಮಗೇ ಗೊತ್ತಿಲ್ಲದಂತೆ..!! ಆದರೆ…ಯಾರೊಬ್ಬರೂ ನಿನ್ನ ಆವರಿಸಿಕೊಳ್ಳುವುದಿಲ್ಲ.. ಜೀವನ ಪರ್ಯಂತ.. ಉದುರಿಬೀಳುತ್ತಾರೆ ನಡುನಡುವೆ ಥೇಟ್ ಗೋಡೆಗಂಟಿದ ಸುಣ್ಣದ ಹಕ್ಕಳೆಯಂತೆ.. ಇಳಿದುಬಿಡುತ್ತಾರೆ ನಿನ್ನ ಹೆಗಲ.. ಥೇಟ್ ಮದಿರೆಯ ನಶೆಯಂತೆ!! ಮೂಗು ಮುರಿಯಬೇಡ .. ಇದೇ ವಾಸ್ತವ! ಎಲ್ಲರೊಳಗೂ ಇವೆ ಗೆಳೆಯಾ.. ಹಲವು ಹಳಹಳಿಕೆಗಳು,ನೋವು ನಲಿವುಗಳು.. ಕನಸು ಕಲ್ಪನೆಗಳು…ಸಮಾಧಾನದ ತುಣುಕುಗಳು.. ಕೋಪ ತಾಪಗಳು,ಪ್ರೀತಿವಿಶ್ವಾಸಗಳು, ನಂಬಿಕೆ ಅಪನಂಬಿಕೆಗಳು.. ಎಲ್ಲ ಎಲ್ಲಾ .. ಆದರೇನು..ಇವು ಕೂಡಾ ನಿರಂತರವಲ್ಲ.. ಪಾತ್ರಗಳು ಬದಲಾದಂತೆ ಬದಲಾಗುತ್ತವೆ ಭಾವನೆಗಳೂ.. ಅನವರತ ಚಲನೆಯೇ ಬದುಕು… ಮತ್ತದಷ್ಟೇ ಸತ್ಯ… ಉತ್ತರ ಹುಡುಕಿ ಅಲೆಯಬೇಡ ಗೆಳೆಯಾ.. ಅಲ್ಲಿ, ಇಲ್ಲಿ, ಅವರಿವರಲ್ಲಿ. ಸುಮ್ಮನೆ ನೋಡುತ್ತಾ ಹೋಗು.. ನಿನ್ನ ನೀನೇ.. ಭಾವಬಂಧಗಳಾಚೆ ನಿಂತು ನೋಡು.. ನಿನ್ನ ಮನಸು ನಿನ್ನದೇ ಮೈಯಂತೆ .. ಎಷ್ಟೊಂದು ಅಂಕುಡೊಂಕು!!. ಅಲ್ಲಲ್ಲಿ ಕಲೆಗಳು,ಮಾಯದ ಮಚ್ಚೆಗಳು.. ಹಳೆಯ ಗಾಯದ ಪಳೆಯುಳಿಕೆಗಳು.. ಎಲ್ಲವೂ ಇರುತ್ತವೆ… ರಾಮ ರಾವಣರು,ಸೀತೆ ಮಂಥರೆಯರು.. ಅಲ್ಲಲ್ಲೇ ಇರುತ್ತಾರೆ… ಅವರ ಸರದಿಗೆ ಕಾಯುತ್ತ.. ಬದುಕಿನೀ ನಾಟಕ ರಂಗದಲ್ಲಿ .. ಅವರ ಪಾತ್ರಕ್ಕಾಗಿ ಕಾಯುತ್ತಾ…]]>

‍ಲೇಖಕರು G

27 June, 2012

4 Comments

  1. Nataraju S M

    ಇದು ಈ ದಿನದ ಕವಿತೆ ಎನ್ನಬಹುದು. ದ್ವಂದ್ವಗಳ ನಡುವೆ ಸಿಕ್ಕಿ ನೊಂದ ಮನಸ್ಥಿತಿಯವರು ಒಮ್ಮೆ ಓದಲೇ ಬೇಕಾದ ಕವಿತೆ.. ಧನ್ಯವಾದಗಳು ಸರ್ ಹಂಚಿಕೊಂಡಿದ್ದಕ್ಕೆ.

  2. meera

    tumba chennagide……..

  3. SunilHH

    ಧನ್ಯವಾದಗಳು ಸರ್ ಹಂಚಿಕೊಂಡಿದ್ದಕ್ಕೆ.

  4. D.RAVI VARMA

    ಎಲ್ಲರೊಳಗೂ ಇವೆ ಗೆಳೆಯಾ..
    ಹಲವು ಹಳಹಳಿಕೆಗಳು,ನೋವು ನಲಿವುಗಳು..
    ಕನಸು ಕಲ್ಪನೆಗಳು…ಸಮಾಧಾನದ ತುಣುಕುಗಳು..
    ಕೋಪ ತಾಪಗಳು,ಪ್ರೀತಿವಿಶ್ವಾಸಗಳು,
    ನಂಬಿಕೆ ಅಪನಂಬಿಕೆಗಳು..
    ಎಲ್ಲ ಎಲ್ಲಾ ..
    ಆದರೇನು..ಇವು ಕೂಡಾ ನಿರಂತರವಲ್ಲ..
    ಪಾತ್ರಗಳು ಬದಲಾದಂತೆ
    ಬದಲಾಗುತ್ತವೆ ಭಾವನೆಗಳೂ..
    ಅನವರತ ಚಲನೆಯೇ ಬದುಕು…
    ಮತ್ತದಷ್ಟೇ ಸತ್ಯ…
    ಉತ್ತರ ಹುಡುಕಿ ಅಲೆಯಬೇಡ ಗೆಳೆಯಾ..
    ಅಲ್ಲಿ, ಇಲ್ಲಿ, ಅವರಿವರಲ್ಲಿ.
    ಸುಮ್ಮನೆ ನೋಡುತ್ತಾ ಹೋಗು..
    it is simply superb,excellent,namage hotte kichhu barohaage kavya baritaa idiiri niivu.ಇಲ್ಲಿಯ ವಾಸ್ತವ ಬದುಕಿನ ಶೂನ್ಯತೆಗೆ, ಕ್ರೌರ್ಯಕ್ಕೆ ಬೇಸತ್ತು ಅದೆಸ್ಟೋ ಜೀವಿಗಳು ಇತಿಹಾಸ ಸೇರಿವೆ, ಆದರೆ ಅವರಿಗೆ ನಿಮ್ಮ ಕಾವ್ಯದ ಸತ್ಯ ತಿಳಿದಿರಲಿಲ್ಲವೇನೋ, ಅಥವಾ ತಿಳಿದು ವಾಸ್ತವವನ್ನು ಎದುರಿಸುವ ದಾರಿ ಇರಲಿಲ್ಲವೇನೋ ,”ನೀವು ಕೊಟ್ಟ ಕಿವಿಮಾತು ಇಲ್ಲಿ ಪೂರ್ಣ ಅರ್ಥ ಪಡೆದುಕೊಳ್ಳುತ್ತದೆ “ಗೊಂದಲಕೆ ಬೀಳದಿರು ಗೆಳೆಯಾ.ಒಂದಸ್ತೆ ನೆನಪಿಡು, ಇವರ್ಯಾರು ನಿರಂತರವಲ್ಲ, ಇಳಿದು ಬಿಡುತ್ತಾರೆ ನಿನ್ನ ಹೆಗಲ ಥೇಟ್ ಮದಿರಿಯೆ ನಿಷೆಯಂತೆ , ಇದೆ ವಾಸ್ತವ ” ನಿಮ್ಮ ಕಾವ್ಯ ಕಿಕ್ಕ್ ಕೊಡೋದೇ ಇಲ್ಲಿ . ಬದುಕು ನಿಂತ ನೀರಲ್ಲ,ಹರಿಯುವ ತೊರೆ ಎನ್ನುವ ಆಂತರ್ಯದ ಚಿಂತನೆಗೆ, ಅದನ್ನು ನವಿರಾದ ಕಾವ್ಯದ ಮೂಲಕಹತಾಶೆ, ಹಳಹಳಿಕೆ ,,ನೋವು,ಒಂಟಿತನ , ಎಲ್ಲ ಸ್ತಿಥಿಗಳಿಗು ಸ್ಪಂದಿಸುವ, ಸಾಂತ್ವನ ನೀಡುವ ನಿಮ್ಮ ಕಾವ್ಯ ನನಗೆ ಮನಸಾರೆ ಇಸ್ತವಾಯ್ತು .
    ರವಿವರ್ಮ ಹೊಸಪೇಟೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading