ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎರಡು ಹನಿಗವನಗಳು

ಕು ಸ ಮಧುಸೂದನ್


1.
ನಾಟಕ
ಆಡದೇ ಹೋದ ನಾಟಕದಲ್ಲೆಷ್ಟು
ಅಂಕಗಳಿದ್ದವು
ಅದೆಷ್ಟು ಪಾತ್ರಗಳಿದ್ದವು?
ಸೂತ್ರಧಾರನಿದ್ದನೊ ಇಲ್ಲವೊ?
ರಂಗದ ಮೇಲೆ ಬಂದ ನಟರ ಊಟ
ಆಗಿತ್ತೊ ಇಲ್ಲವೊ
ಯಾರಿಗೆ ಗೊತ್ತಿತ್ತು?
ಕೊನೆ ಪ್ರಶ್ನೆ
ಹೋಗಲಿ ನಿಜದಲ್ಲಿ
ನಾಟಕವಾದರು ಇತ್ತೆ?
ಇಲ್ಲ
ಇತ್ತೆಂಬುದೇ ನಾಟಕವೇ?

2.
ಇಷ್ಟದ ಪ್ರಶ್ನೆ
ನೆಲಕೆ
ನೇಗಿಲೆಂದರೆ
ಇಷ್ಟವೊ
ಕಷ್ಟವೊ
ಉತ್ತಿಸಿಕೊಳ್ಳಲೇ
ಬೇಕು!
ಚಿತ್ತವಿರದಿದ್ದರೂ
ಬೆಳೆಯಲೇಬೇಕು!

‍ಲೇಖಕರು G

5 July, 2015

3 Comments

  1. ಅಕ್ಕಿಮಂಗಲ ಮಂಜುನಾಥ

    ಎರಡೂ ಹನಿಗಳು ಸೂಪರ್ .

  2. Anonymous

    Simply sooooper

  3. Rohini Satya

    Eradu hanigavanagalu chennaagive sit

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading