ಮನಸು ಹದಗೆಡಸಿ ಹಾಗೆ ಹೋಗಿಬಿಟ್ಟೆ ದೇವತೆಯೇ
ಇಟ್ಟ ಕನಸು ಬೆಂಕಿಗೆ ಹಾಕಿ ಎದ್ದುಬಿಟ್ಟೆ ದೇವತೆಯೇ.
ಸಿಹಿ ಮಾತಿನ ಪಾಯಸ ಅನುದಿನವೂ ಬಿಡದೆ ಸುರಿದು
ಮೌನ ಹಕ್ಕಿ ಗೋಣು ಸಹಜ ಮುರಿದುಬಿಟ್ಟೆ ದೇವತೆಯೇ.
ಪ್ರೇಮದ ಹೂ ಬುಟ್ಟಿಯಲಿ ನವಿರಾದ ಹಾವುಗಳ ಬಚ್ಚಿಟ್ಟು
ಮೋಜಿನ ಆಟವ ಆಡಿ ಸುಸ್ತುಮಾಡಿಬಿಟ್ಟೆ ದೇವತೆಯೇ.
ಒಲವಿನ ಅರಮನೆಯ ಬಾಗಿಲಿಗೆ ಕಾರಿಯ ಮುಳ್ಳು ಜಡಿದು
ಬದುಕಿನ ನೂರಾರು ಆಸೆಗಳ ಕೊಂದುಬಿಟ್ಟೆ ದೇವತೆಯೇ.
2

ಎದೆಯಿಂದ ಎದ್ದು ಹೋಗುವಾಗ ಏನೂ ಹೇಳಲಿಲ್ಲ ಏಕೆ
ಒಲುಮೆಯ ದೀಪ ಆರಿಸಿ ಸದ್ದಿಲ್ಲದೆ ಸುಮ್ಮನಾದದ್ದು ಏಕೆ
ಚಿಗರುವ ಮುನ್ನವೇ ಮಿಡಿ ಹೂಗನಸುಗಳ ಕತ್ತು ಹಿಚುಕಿ
ನಟ್ಟ ನಡುದಾರಿಯಲಿ ಕೈಬಿಟ್ಟು ಸದ್ದಿಲ್ಲದೆ ನಡದದ್ದು ಏಕೆ
ಗುಟ್ಟಾಗಿ ಬಚ್ಚಿಟ್ಟ ಪ್ರೇಮೋತ್ಸವದ ಸುವರ್ಣ ದೀರ್ಘ ಹೊತ್ತಿಗೆ
ಯಾರಿಗೂ ಹೇಳದೆ ಕೇಳದೆ ಸದ್ದಿಲ್ಲದೆ ಸುಟ್ಟುಹಾಕಿದ್ದು ಏಕೆ
ನಿನ್ನ ಮೇಲಿರುವ ಹಿಡಿಯಷ್ಟು ನಂಬಿಗೆಗೆ ನಂಜು ಬೆರಸಿ
ಒಲವ ಹತ್ತೆಗೈದು ನೀನೇ ಶಾಶ್ವತ ಮರೆಯಾದದ್ದು ಏಕೆ
ಎರಡು ಗಜ಼ಲ್‍ಗಳು
ನಿಮಗೆ ಇವೂ ಇಷ್ಟವಾಗಬಹುದು…






ಚೆನ್ನಾಗಿವೆ, ಎರಡೂ ಗಜಲ್ ಗಳು.
NINNA MELIRUVA HIDIYASTU NAMBIGEGE NANJU BERESI wah! nicle lines tirupati ji…… hige barita iri
sogasagive
nice…
tumbaa hidisidavu..
Dhanyavadagalu MMshaik avare