ಬೀನಾ ಶಿವಪ್ರಸಾದ
ಭಾವನಾತ್ಮಕ ಜೀವಿ
ಮಾನವ
ಭಾವನೆಗಳನ್ನು ವ್ಯಕ್ತಪಡಿಸಲು
ಬಳಸುವರು ಮುಖದ ಚರ್ಯೆಯ
ವಿಧ ಅಪಾರ
ಸಾವಿರ ಮಾತುಗಳನ್ನೂ
ಒಂದು ಮುಖಚರ್ಯೆ
ವಿವರಿಸುವಂತೆ
ಇಂದಿನ ಎಮೋಜಿಗಳೂ
ತರ ತರ
ಮುಗುಳು ನಗುವ
ನಗು ಬೇಕೋ
ಹಲ್ಲು ತೆಗೆದು ಜೋರಾಗಿ
ನಗುವದು ಬೇಕೋ
ಸಾಲದೆಂಬಂತೆ
ಕೆಂಪಾದ ಸೂರ್ಯನಂತೆ
ಸಿಟ್ಟು ಮಾಡಿಕೊಂಡಿರುವದು ಬೇಕೋ?
ಒಂದೇ ಕಣ್ಣಲ್ಲಿ ಅಳುವದು ಬೇಕೋ
ಎರಡು ಕಣ್ಣಲ್ಲಿ ಜೋರಾಗಿ
ಅಳುವದ ನೋಡಬೇಕೋ
ನವರಸಗಳನ್ನೂ ಮೀರಿಸಿದ
ಎಮೋಜಿಗಳು
ಒಂದಕ್ಕಿಂತ ಇನ್ನೊಂದು
ಸಾಲದೆಂಬಂತೆ
ಹುಡುಗನನ್ನೊಳಗೊಂಡಂತೆ
ಎಲ್ಲಾ ಪ್ರಾಣಿಗಳ
ಮುಖವನ್ನು
ಎಡಗಡೆಗೆ ತಿರುಗಿಸಿ
ಹುಡುಗಿ ಎಲ್ಲದರಲ್ಲೂ ಉಲ್ಟಾ
ಎಂದು ಆಡಿಕೊಳ್ಳುವವರಿಗೆ
ಇಂಬು ಕೊಟ್ಟಂತೆ
ಕೆಂಪಾದ ಅಂಗಿ ತೊಟ್ಟ
ಹುಡುಗಿಯೊಬ್ಬಳನ್ನು ಮಾತ್ರ
ಬಲಗಡೆಗೆ ತಿರುಗಿಸಿಟ್ಟ
ಎಮೋಜಿ ಸೃಷ್ಟಿಸಿದವರಿಗೆ
ಹೆಣ್ಣಾದ ನಾನು ಯಾವ
ಎಮೋಜಿ ಕಳುಹಿಸಲಿ?






0 Comments