ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎನ್‌ ರವಿಕುಮಾರ್‌ ಟೆಲೆಕ್ಸ್‌ ಕವಿತೆ ಪ್ರಾರ್ಥನೆ…

ನೀನು ಎಷ್ಟೊಂದು ನೆನಪುಗಳಿಗೆ ರೂಪವೂ
ರೂಪಕವೂ ಆಗಿದ್ದೀಯ..

ಅರಳಿ ನಿಂತ ಹೂವಿನ ಸೊಬಗನ್ನು ಸಂಭ್ರಮದಿಂದ ನೋಡುವುದೂ ಕೂಡ ಒಂದು ಅನುಭೂತಿಯೇ…
ಅದು ದಕ್ಕಲೇ ಬೇಕೆಂದೇನೂ ಇಲ್ಲ;
ಹೀಗೆ…..ನಿನ್ನ ನಾನು ನೋಡುತ್ತೇನೆ
ಕತ್ತಲಿಗೆ ಬೆಳಕಾಗಿ ಮೈ ತುಂಬಿದ ನಕ್ಷತ್ರಗಳಂತೆ
ಮತ್ತೆ ಮತ್ತೆ …

ಇದಕ್ಕೆಲ್ಲ ಕಾರಣ ಹೇಳಬೇಕೆಂದಿಲ್ಲ;
ಹೆಸರಿಡಲಾಗದ ಎಷ್ಟೋ ಸಂಬಂಧಗಳು
ಇಲ್ಲಿ ಜೀವಿಸುತ್ತವೆ.

ಜಡವಾಗುವುದು ನನಗಿಷ್ಟವಿಲ್ಲ;
ನನ್ನ ನೆನಪಿನೊಳಗೆ ನಿನ್ನಿಂದ ಮಿಸುಕಾಡುವ
ಖುಷಿಗೆ ಆಯಸ್ಸು ತೀರದಿರಲಿ

ಸ್ವರ್ಗ ಸಹವಾಸವೇ ಬೇಡ
ಎಂದಾದರೂ ಒಂದು ದಿನ
ಈ ಭೂಮಿಯ ತಿರುವಿನಲ್ಲೇ
ಭೇಟಿ ಆಗೋಣ
ಒಂದರಗಳಿಗೆ ಕುಂತು ಮಾತಾಡೋಣ
ಲೋಕ ಮರೆತು

ಅಲ್ಲಿಯವರೆಗೂ ನಾವಿಬ್ಬರೂ
ಬದುಕಿರೋಣ

ಇದಿಷ್ಟೇ
ನನ್ನ ಪ್ರಾರ್ಥನೆ….

‍ಲೇಖಕರು Admin

11 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading