ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎನಗೇ ನೀ ನಗುವ ಕಡಲಿದ್ದಂತೆ…!

ನಗುವ ಕಡಲು!

chetan solagi

 

 

 

 

 

 

 

 

ಚೇತನ್ ಸೊಲಗಿ

ತಟಸ್ಥನಾಗಿ ಧ್ಯಾನಿಸುತ್ತೇನೆ ಒಮ್ಮೆ
ಏಕಾಂತ ಭಾವದ ಮುಂಗುರುಳ ಮೀರಿ
ಚೆಲುವ ಗನ್ನಡಿಯ ನಗುವ ಹೀರಿ
ಅರ್ಥವರಿಯೆನು ನಾನು
ಭಾವದಾ ಹಸುಗೂಸೆ
ಹಸಿ ಹಸಿ ಒಲವುಗಳ ತೆರೆದಿಟ್ಟರೆ
ಬಚ್ವಿಡಲಿ ಹೇಗೆ
ಬಿಸಿಯುಸಿರ ಆಸೆಗಳ
ಬಳಿಬಂದು ನೀನಕ್ಕು ಬರಸೆಳೆದರೆ

ಎದೆ ಚಿತ್ತ ಅತ್ತಿತ್ತ
ಕತ್ತೆತ್ತಿ ಕುಣಿವುದು
ಕಾಲ್ಗೆಜ್ಜೆ ಕಟ್ಟಿಕೊಡೊ ಕವಿತೆಯೊಳಗೆ
ಮುದ ಮದದ ಕಾವ್ಯವದು
ಹೊರ ಹೊಮ್ಮಿ ಬರುವುದು
ಹಾರಿ ಬರೋ ನಯನಗಳ ನೋಟದೊಳಗೆ

ಕಣ್ ರೆಪ್ಪೆ ಕುಣಿಸುವ
ನಗುಮೊಗದ ಹೂ ನೀನು
ನವಿರೇಳೊ ಕನಸುಗಳ ಜನನಿಯಂತೆ
ಮಗುವಾಗಿ ಮಲಗುವೆ
ಆ ಮೊಗದ ಚೆಲುವಲಿ
ಎನ್ನ ಆಂತರ್ಯವದು ಸುಖಿಸುವಂತೆ

ಚಿತ್ತಾರ ಹಾದಿಯೊಳು
ಬಿತ್ತರಿಸೊ ಭಾವವ
ಬಳಿ ಬಂದು ಅರ್ಥೈಸು ಅರಿಯುವಂತೆ
ನಾಚಿ ದೂರಾಗದಿರು
ನಲ್ಮೆಯ ನವಿಲೆ
ಎನಗೇ ನೀ ನಗುವ ಕಡಲಿದ್ದಂತೆ…!

love2

‍ಲೇಖಕರು Admin

14 February, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading