ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎದೆ ಬಡಿತ ಹೆಚ್ಚಿಸುವ ಅರೆನಗ್ನ ನೀನು ನನಗೆ ಬೇಕು..

ಬಿ ವಿ ಭಾರತಿ 

couple kissಎಲ್ಲಿ ಹೋದೆ ನೀನು ಇತ್ತಿತ್ತಲಾಗಿ …
ನೆನ್ನೆ ಮೊನ್ನೆ ಅಡಿಗೆ ಮನೆಯಲ್ಲಿ
ಸಾರು ಕುದಿಸುವಾಗ
ನವಿರಾಗಿ ನನ್ನ ಬಳಸುತ್ತಿದ್ದೆ,

ಯಾವುದೋ ರಾಗ ಗುನುಗುವಾಗ
ಜೊತೆಗೆ ದನಿಗೂಡಿಸುತ್ತಿದ್ದೆ,
ಸೂರ್ಯನ ತೀಕ್ಷ್ಣತೆಗೊಮ್ಮೆ,
ಚಂದ್ರನ ನಿಗೂಢತೆಗೊಮ್ಮೆ
ಬೆರಗಾಗುವಾಗ ಧುತ್ತೆಂದು ನಿಲ್ಲುತ್ತಿದ್ದೆ.

ಯಾವುದೋ ನೆನಪು ಕದಲಿಸಿದಾಗ,
ಬೇಗೆ ಹಬ್ಬುವಾಗ, ಖುಷಿ ತಬ್ಬುವಾಗ
ಕನಸು ಸತ್ತಾಗ, ಮನಸು ಬೇಸತ್ತಾಗ,
ನಾನು ನಾನಾದಾಗ
ನಾನು ಅವನಾದಾಗ
ಅವನು ಅವಳಾದಾಗ
ನಾಭಿಯಿಂದ ನೀನು ಹುಟ್ಟುತ್ತಿದ್ದೆ.

ಬಣ್ಣಬಣ್ಣಗಳನೆಲ್ಲ ಸುರಿದ
ಕನಸ ಪಾತ್ರೆಯಲಿ
ಏಳು ಬಣ್ಣ ಸೇರಿಕೊಂಡು
ನನಸ ಬಿಳಿಯಾಗಿ ಹೋದಾಗ
ನೀನು ನನ್ನ ಅನುಮತಿಯೇ ಇಲ್ಲದೇ
ಬರುತ್ತಿದ್ದೆ,
ಎಂಟನೆಯ ಬಣ್ಣವೊಂದರ
ನಿರೀಕ್ಷೆ ಹುಟ್ಟುಹಾಕುತ್ತಿದ್ದೆ …

ಮರಳಿ ಬಾ ಎದೆಯ ಪದ್ಯವೇ,
ಎಲ್ಲ ಬಿಚ್ಚಿ ಹರಡುವ ಗದ್ಯದ ಬೆತ್ತಲೆಯೊಡನೆ ಕಾಮ ಸುಖವಾದರೂ,
ತುಸು ಸರಿದು …

ಎದೆ ಬಡಿತ ಹೆಚ್ಚಿಸುವ
ಅರೆನಗ್ನ ನೀನು ನನಗೆ ಬೇಕು …

‍ಲೇಖಕರು Admin

18 February, 2016

8 Comments

  1. Bharathi b v

    ಥ್ಯಾಂಕ್ಸ್ ಅವಧಿ 😀

  2. ಶಮ, ನಂದಿಬೆಟ್ಟ

    My God… I really want to get lost somewhere in between a dense forest now…

  3. Krishna

    “WOW”

    Fantastic Bharathi Madam….

    Fascinating…Fabulous…

  4. sangeetha raviraj

    ತುಂಬಾ ಇಷ್ಟವಾಯಿತು ನಂಗೆ ಕವಿತೆ…

  5. Prasad

    Wow… Fabulous…
    – Prasad, Angola

  6. Bharathi b v

    ಥ್ಯಾಂಕ್ಸ್ ಎಲ್ಲರಿಗೂ

  7. ನಾನಾ,ಕೊಳ್ಳೇಗಾಲ.

    ಉತ್ತಮ ಕವನ .ತುಂಬಾ ಇಷ್ಟವಾಯಿತು.

  8. Rajesh SG

    ಕಾಮ ದೇಹ ತಣಿದು ಪ್ರೀತಿ ಗಟ್ಟಿಯಾಗಲು…. ಕ್ಷಣದಲ್ಲಿ ಮುಗಿಯುವ ಔಷಧಿ ಅದಾದರೆ
    ಸದಾ ಪ್ರೀತಿಯ ಅಮಲಿಗೆ ಅರೆ ನಗ್ನ ಮದ್ಯ ಇದಲ್ಲವೆ……

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading