ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎದೆಯ ಮೇಲಿನ ಬಟ್ಟೆ ಜಾರುವುದು..

ಆನಂದ ಎಸ್ ಗೊಬ್ಬಿ

ಎಷ್ಟೊಂದು
ಜಾಗರೂಕತೆ ವಹಿಸಬೇಕು
ಎದೆಯ ಮೇಲಿನ
ಬಟ್ಟೆ ಜಾರುವುದು
ಒಮ್ಮೊಮ್ಮೆ…!

ಆ ನೋಟಗಳು
ಬರೀ, ಅವುಗಳ
ಮೇಲೆಯೇ,
ನಾವೇನು
ಬಯಸಿ ಬಂದಿದ್ದಲ್ಲ..!

ಆ ಕುಲ
ಕಣ್ಣಿನ ಅಳತೆ
ಪಟ್ಟಿಯಲ್ಲಿ
ಅವುಗಳಿಗೆ ಅಡ್ಡೆಸರಿಸಿದೆ
ದಾರಿಯ ಬದಿಯಲ್ಲಿ
ಹೀಯಾಳಿಸಿದ್ದು ಇದೇ..!

ಇಲ್ಲಿ ಬಿರುಸಾದವುಗಳಿಗೆ
ಉಬ್ಬಿದವುಗಳಿಗೆ
ಬಹು ಬೇಡಿಕೆ,
ಊಹಿಸಿರಲಿಲ್ಲ
ತೂಗುವ ತಕ್ಕಡಿಗೆ
ಆಸರೆಯಾಗಿದ್ದು…!

ಅವನ ಸುಖದಾಟದಲ್ಲಿ
ಸುಖಿಸುವಲ್ಲಿ ನೆರವಾಗಿ
ನರಳಾಡಿವೆ,
ತಪ್ಪು ಮಾಡಿದ್ದಲ್ಲ
ತಾನಾಗಿಯೇ ಒಲಿದು‌ ಬಂದದ್ದು…!

‍ಲೇಖಕರು Avadhi

18 June, 2021

1 Comment

  1. ಎಂ.ಜವರಾಜ್

    ಕವಿತೆ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading