ಬದುಕ ಪಯಣಕ್ಕೆ ಯಾವುದು ದ್ರುವತಾರೆ?..
ಉಷಾ ಕಟ್ಟೇಮನೆ
ಮಾತು ಭಾರವಾದ ಹೊತ್ತು..
ಮಂಡಿಯೂರಿ ಕುಳಿತಿದ್ದೇನೆ, ಮುಖಕ್ಕೆ ಅಂಗೈಯ ರಕ್ಷಣೆ;
ಎಷ್ಟೊಂದು ಮಾತಾಡಿಬಿಟ್ಟೆ!
ನಾಚಿಕೆಯಾಗುತ್ತಿದೆ;ಎಲ್ಲವನ್ನೂ ಮುಗಿಸಬೇಕಾಗಿದೆ.
ಇನ್ನು ಹೊರಡುವ ಸಮಯ.
ಅತೃಪ್ತತೆಯ ವಿಷಾಧಯೋಗದ ಚಲನೆ.
ಅನಂತ ಆಕಾಶದೆಡೆಗೆ ಎರಡೂ ಕೈಚಾಚಿ ನಿಂತಿದ್ದೆ;
ಒಂದೇ ಒಂದು ಮಿಂಚು. ಕಂಡ ಮುಖ ಶಾಶ್ವತ;
ಒಪ್ಪಿ, ಹಂಬಲಿಸಿ, ಅಪ್ಪಿ,ಒಳಗೆಲ್ಲಾ ಜೀಕಾಡಿ..
ಕಣಕಣದಲ್ಲೂ ಮಿಂಚು ಸಂಚಾಗಿ ಸಂಚರಿಸಿ
ನನ್ನದೆನ್ನುವ ಲಯದಲಿ ತಾಳ ತಪ್ಪಿದ ಭಾವ.
ಭೂಮಿಯ ಪರಿಭ್ರಮಣಕ್ಕೆ ಬೆಳಕಿನೊಡೆಯನದೇ ಕುಮ್ಮಕ್ಕು;
ಆಸೆಬುರುಕಳು ನಾನು, ಬೀಳಲೇ ಬೇಕಾಗಿತ್ತು
ಬಿದ್ದೆ; ಇನ್ನೆಂದೂ ಏಳಲಾರದಂತೆ.
ಕಳೆದುಕೊಂಡದ್ದಕ್ಕೆ ಋಣಭಾರದ ಸಂಕಟವಿಲ್ಲ
ನನ್ನ ತಲೆಯಡಿಗೆ ನನ್ನದೇ ಕೈದಿಂಬು.
ಸ್ವರ್ಗದಲ್ಲಿ ದೇವಗಂಗೆ, ನರಕದಲಿ ಅವಳೇ ವೈತರಣಿ;
ಮುಖವಾಡಗಳ ಸಂತೆಯಲಿ ಸಹಸ್ರಾರು ಜಿಹ್ವೆಗಳು
ವಾಸುಕಿಯ ವಜ್ರಕ್ಕೆ ಕಾರ್ಕೋಟಕ ವಿಷದ ಬೇಲಿ.
ಪುಣ್ಯ ಕೈಚಾಚಲಿಲ್ಲ, ಬಂಧ ಬೆಸುಗೆಯಾಗಲಿಲ್ಲ.
ಪೂರ್ಣಾಹುತಿಯಲ್ಲಿ ಅವತರಿಸಿತು ಆ ವಿಶ್ವಾಮಿತ್ರ ಹಸ್ತ!
ಬದುಕ ಪಯಣಕ್ಕೆ ಯಾವುದು ದ್ರುವತಾರೆ?
ಕತ್ತಲಲ್ಲಿ ಕಾಡಹಾದಿ; ನಡೆದುಬಿಡುತ್ತೇನೆ.
ಹೆಚ್ಚು ದೂರವಿಲ್ಲ; ಎದೆಯ ಇಬ್ಬನಿಗೆ ಮಿಣುಕುಹುಳದ ಕಾವಲು.
ಒಂಟಿಪಯಣದಲ್ಲಿ ಶಬ್ದ ಸಂತೆಯಿಲ್ಲ;ಕಣ್ಣೀರಿಗೆ ಕಳವಳವಿಲ್ಲ.
ಒಳಬೆಳಕಿಗೆ ಲೋಕ ಪರಿಧಿಗಳಿಲ್ಲ.
’ನಿನಗೆ ನೀನೆ ಗುರು’ ಕವಿವಾಣಿ ನಂಬಿದ್ದೇನೆ; ಅದೀಗ ನನ್ನದು..







chennaagide…..havdu ninage neene guru…!!
kavana tumba chennagide
ultimate….odaladada bhavanegalu..manamuttuva,manabechhisuva,,saalugalu….
ಬದುಕ ಪಯಣಕ್ಕೆ ಯಾವುದು ದ್ರುವತಾರೆ?
ಕತ್ತಲಲ್ಲಿ ಕಾಡಹಾದಿ; ನಡೆದುಬಿಡುತ್ತೇನೆ.
ಹೆಚ್ಚು ದೂರವಿಲ್ಲ; ಎದೆಯ ಇಬ್ಬನಿಗೆ ಮಿಣುಕುಹುಳದ ಕಾವಲು.
ಒಂಟಿಪಯಣದಲ್ಲಿ ಶಬ್ದ ಸಂತೆಯಿಲ್ಲ;ಕಣ್ಣೀರಿಗೆ ಕಳವಳವಿಲ್ಲ.
ಒಳಬೆಳಕಿಗೆ ಲೋಕ ಪರಿಧಿಗಳಿಲ್ಲ.
’ನಿನಗೆ ನೀನೆ ಗುರು’ ಕವಿವಾಣಿ ನಂಬಿದ್ದೇನೆ; ಅದೀಗ ನನ್ನದು..
ii saalugalu ultimate………
ಈ ಕವಿತೆಯಲ್ಲಿ ಒಂದು ವಿಶೇಷತೆಯನ್ನು ಗಮನಿಸಿದ್ದೇನೆ.ತನ್ನನ್ನೇ ತಾನು ಕಸಿವಿಸಿಗೊಳಿಸಿಕೊಂಡ ಎಷ್ಟೊಂದು ಮಾತಾಡಿಬಿಟ್ಟೆ ಅನ್ನುವ ತಣ್ಣಗಿನ ಭಾವ. ಮೇಲ್ಮಟ್ಟದಲ್ಲಿಯೂ ಅದೇ ರೀತಿ ಕೆಳ ಮಟ್ಟದಲ್ಲಿಯೂ ನಿಂತು ಮೇಲಕ್ಕೇರಿಸಿಕೊಳ್ಳುವ ಸುಂದರ ಅಭಿವ್ಯಕ್ತಿ ಈ ಕವಿತೆಯಲ್ಲಿ ಗೋಚರಿಸಿತು. ಕವಿತೆ ಚೆನ್ನಾಗಿದೆ. ಇದು ನಿಮ್ಮ ಕೆಲವೇ ಕೆಲವುಗಳಲ್ಲಿರುವ ಕಾವ್ಯ ಪ್ರಯತ್ನ ಅಂತ ಭಾವಿಸುತ್ತೇನೆ. ಹಾಗಾಗಿ ಪ್ರತಿಕ್ರಿಯಿಸದಿದ್ದರೆ ಮನ್ನಸ್ಸು ನಿಲ್ಲಲಾಗದು ಅನ್ನಿಸಿತು.ಅಭಿನಂದನೆಗಳು ಅಕ್ಕ.