ನಿನ್ನ ಒಡಲ ಪ್ರೀತಿಗೆ
ಪ್ರತಿಭಾ ಕಾಗೆ
ನೀ ಹೊತ್ತೆ ಹೆತ್ತೆ
ಸಲುಹಿದೆ ಕಣ್ಣಲ್ಲಿ ಕಣ್ಣಿಟ್ಟು
ಅದಕ್ಕೆನಾದರು ತಿರುಗಿ
ಕೇಳಿದೆಯಾ?
ಕಣ್ಣಿರು ಒರೆಸಿದೆ
ಹೇಸಿಗೆಯ ಬಳಿದೆ
ಅದರಲ್ಲೇನು ಸ್ವಾರ್ಥವಿತ್ತೆ?
ಎಡವಿ ಬಿಳುವಾಗ
ನೀನೆ ತಾನೆ ಕೈ ಹಿಡಿದೆ.
ನಿನ್ನ ಕೈ ಬೇರಳುಗಳ
ಹಿಡಿದು ನಡೆಯುವದ ನಾ ಕಲಿತೆ.
ನಿನ್ನ ತೋಳ ತಕ್ಕೆಯಲಿ
ಆರಾಮಾಗಿ ನಿದ್ರಿಸಿದೆ.
ನಿನ್ನ ಕೈ ಬಳೆಗಳ ನಾದ ಕೇಳಿ
ತಟ್ಟನೆ ಎದ್ದು ಕುಳಿತೆ.
ನನಗೆ ಒಂದು ಸಣ್ಣ ಮುಳ್ಳು
ತಾಗಿದರೂ ನಿನ್ನ ಕಣ್ಣಲ್ಲಿಹನಿ
ನೀರು ಜಿನುಗುತು.
ನನ್ನ ನಗುವಲಿ ನಿನ್ನ
ನೋವು ಮರೆತೆ.
ನಿನ್ನ ಒಡಲ ಪ್ರೀತಿಗೆ
ನಾನೆಂದೂ ಚಿರರುಣಿ…







avvanedeya pritige saati innondilla….