ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ಡುಂಡಿರಾಜ್ ಕವಿತೆ- ಗೋಪಿ ಹೇಳಿದ್ದು…

ಎಚ್ ಡುಂಡಿರಾಜ್

ನಿನಗೆಂದೇ ಹಾಲು
ಕರೆದು ಇಟ್ಟಿದ್ದೆ
ಕರೆದು ಕೊಡುವಷ್ಟರಲ್ಲಿ
ನೀನೇ ಕುಡಿದುಬಿಟ್ಟಿದ್ದೆ
ನಿನಗೆಂದೇ ಹಾಕಿದ್ದೆ
ಹಾಲಿಗೆ ಹೆಪ್ಪು
ಆ ಮೊಸರು ನೀನು


ತಿಂದರೇನು ತಪ್ಪು?
ನಿನಗೆಂದೇ ಕಡೆದು
ತೆಗೆದ ಬೆಣ್ಣೆ ಮುದ್ದೆ
ಕೊಡುವ ಮುನ್ನ
ನೀನೇ ಕದ್ದು ಮೆದ್ದೆ
ತಪ್ಪೇನಲ್ಲ ಆದರೂ
ನನ್ನ ಕಂಡಾಕ್ಷಣ
ಕಳ್ಳನ ಹಾಗೆ ಓಡು
ಸಿಕ್ಕಿ ಬೀಳು, ಕೈಗಳ
ಕಟ್ಟಿದಂತೆ ಮಾಡುವೆ
ನೀ ಅತ್ತಂತೆ ಮಾಡು
ನೆನಪಿರಲಿ ಕಂದಾ
ನಮ್ಮಿಬ್ಬರ
ಈ ಒಳ ಒಪ್ಪಂದ!

ಫೋಟೋ ಕೃಪೆ : ಚಿತ್ರಮಿತ್ರ

‍ಲೇಖಕರು avadhi

8 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading