ಎಚ್ ಗೋಪಾಲಕೃಷ್ಣ
ಬದಿಗಿರಲಿ
ಬದಿಗಿರಲಿ ನಿನ್ನ ಹಮ್ಮು ಬಿಮ್ಮು
ನಿನ್ನ ಲಯ ಸಂಗೀತ
ಭಾವ ಭ್ರಮೆ
ಬಾ
ಒಲವಿರಲಿ ಎದೆಯೊಳಗ
ಬೆಚ್ಚನ ಅಭಿಮಾನವಿರಲಿ
ಪ್ರೀತಿಯ ಸೆಳೆನೋಟವಿರಲಿ
ಮಾಸದ ಮುಗ್ಧ ಮಂದಹಾಸದ
ಮುಖವಾಡವಿರಲಿ
ನನ್ನ ನಿನ್ನ ನಡುವೆ
ಜಾತಿ ಅಡ್ಡ ಬಾರದಿರಲಿ
ಅಂತಸ್ತು ದೂರವಿರಲಿ
ಬ್ಯಾಂಕಿನ ಪಾಸ್ ಬುಕ್ಕು ಮರೆಯಲಿ

ಅಂದಿನ ಜತೆಯಾಟ ಮಾತ್ರ
ಇರಲಿ ಮನದಲಿ
ಹೊತ್ತಿನ ಯೋಚನೆ ದೂರವಿರಲಿ
ಅಂದಿನ ದಿನದ ಸವಿನೆನಪು ಇರಲಿ
ಹೃದಯದಲಿ ತುಂಬಿರಲಿ
ಪ್ರೀತಿ ವಿಶ್ವಾಸ ಮತ್ತು ಪ್ರೀತಿ ವಿಶ್ವಾಸ ವಷ್ಟೆ






0 Comments