ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ಎನ್ ಆರತಿಗೆ ಪ್ರತಿಷ್ಠಿತ ಕಸಾಪ ಪ್ರಶಸ್ತಿ

ಖ್ಯಾತ ಲೇಖಕಿ, ಅನುವಾದಕಿ, ಮಾಧ್ಯಮ ತಜ್ಞೆ ಎಚ್ ಎನ್ ಆರತಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಕೊಡಮಾಡುವ ಪಂಕಜಶ್ರೀ ದತ್ತಿನಿಧಿ ಪ್ರಶಸ್ತಿ ಘೋಷಿಸಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜರುಗಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ್ ತಿಳಿಸಿದ್ದಾರೆ.

ಹಿರಿಯ ಕಾದಂಬರಿಕಾರ್ತಿ ಎ ಪಂಕಜಾ ಅವರು ಈ ದತ್ತಿ ನಿಧಿಯನ್ನು ಸ್ಥಾಪಿಸಿದ್ದಾರೆ.

ದೂರದರ್ಶನ ಕೇಂದ್ರದಲ್ಲಿ ಹಿರಿಯ ಕಾರ್ಯಕ್ರಮ ನಿರ್ಮಾಪಕರಾಗಿರುವ ಎಚ್ ಎನ್ ಆರತಿ ಅವರು ದೇಶ ವಿದೇಶಗಳ ಹಲವು ಪ್ರಶಸ್ತಿ ಹಾಗೂ ಫೆಲೋಶಿಪ್ ಗಳಿಗೆ ಪಾತ್ರರಾಗಿದ್ದಾರೆ.

‘ಸ್ಮೋಕಿಂಗ್ ಜೋನ್’ ಕವನ ಸಂಕಲನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.

ಇದು ‘ಬಹುರೂಪಿ’ಯ ಪ್ರಕಟಣೆ- ಇಲ್ಲಿ ಕ್ಲಿಕ್ಕಿಸಿ

ಇವರ ‘ಓಕುಳಿ’ ‘ಬಾ ಹೇಳಿ ಕಳಿಸೋಣ ಹಗಲಿಗೆ’ ಕವನ ಸಂಕಲನಗಳು ಲೇಖಕಿಯರ ಪರಿಷತ್ತು, ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿಗೆ ಪಾತ್ರವಾಗಿದ್ದವು.

‘ಆಧ್ಯಾತ್ಮ ಶಿಖರ’ ಹಾಗೂ ‘ಪ್ರಣಯ ಶತಕ’ ಇವರ ಅನುವಾದಿತ ಕೃತಿಗಳು. ‘ಇದು ಪ್ರೇಮಮಲ್ತೆ’ ನಾಟಕ ಕೃತಿ. ಇವರ ‘ಬೆಟ್ಟದಡಿಯ ಬಿದಿರ ಹೂ’ ಪ್ರವಾಸ ಕಥನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ.

‍ಲೇಖಕರು avadhi

9 July, 2021

1 Comment

  1. ಲಲಿತಾ ಸಿದ್ಧಬಸವಯ್ಯ

    ಅಭಿನಂದನೆಗಳು ಆರತಿ, ಪ್ರಶಸ್ತಿಗಳು ನಿಮಗೆ ಹೊಸದಲ್ಲ. ಪ್ರತಿ ಹೊಸ ಪ್ರಶಸ್ತಿ ನಿಮಗೆ ಸಂದಾಯವಾದಾಗ ನಿಮ್ಮನ್ನು ‌ಓದುವವರಿಗೆ ಹೊಸ ಖುಷಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading