ದ್ವಿಪದಿಗಳು
– ಪಿ.ಮಂಜುನಾಥ
ಮುಂದೆ ವರುಷ ವರುಷ ವಸಂತ ಬರುತ್ತಾನೆ ಗೆಳತಿ
ನೆನಪಿರಲಿ, ಮನುಷ್ಯನಿಗೆ ಯೌವನ ಒಂದೇ ಒಂದು ಸರತಿ
*
ನಿನ್ನ ನೆನಪು ಕರುಣಿಸಿದ ನೋವಿನೊಂದಿಗೆ ಕಾದಾಡುತ್ತಿದ್ದೇನೆ
ಎಂದೂ ನೋವು ಸೋಲೊಪ್ಪಿಲ್ಲ, ನನಗೂ ಗೆಲ್ಲಲಾಗುತ್ತಿಲ್ಲ!
*
ಕನಸುಗಳು ಕಮರಿ ಎದೆಯೆಲ್ಲ ನೋವಿನ ಗೂಡಾಯಿತು
ನೋವು ಪದವಾಗಿ, ಪದಗಳು ಸಾಲುಸಾಲಾಗಿ ಹಾಡಾಯಿತು
*
ಹೃದಯ ಹಾಳೆಯ ಮೇಲೆ ಚಿತ್ರ ಬಿಡಿಸಿದ ನೀನು
ಬಣ್ಣ ತುಂಬದೇ ಹೋದುದ್ದರ ಅರ್ಥವಾದರೂ ಏನು?
*
ಒಡಲೊಳಗೆ ಮೊರೆವ ಸಂಕಟವ ಸಹಿಸಲಾಗದು
ಖರೆಯೆಂದರೆ ನಿನ್ನ ನೆನೆಯದೆ ನನಗಿರಲಾಗದು!
*
ಬದುಕೇಕೆ ಹೀಗೆ? ಖಾಯಂ ಉತ್ಸಾಹದ ಬುದ್ಬುದೆಯಲ್ಲ
ಬತ್ತಿ ಭಣಗುಟ್ಟಿ ಸಂಕಟಕೆ ಎಸೆವ ಬಿಸಿಲೂ ಅಲ್ಲ!
]]>





ನಿಮ್ಮ ದ್ವಿಪದಿಗಳು ಮನದಲ್ಲಿ ನಿಲ್ಲುವಂಥವು…
superbbb
ನಾನು ದ್ವಿಪದಿ,ತ್ರಿಪದಿ ತುಬಾ ಕಾಲವಾಗಿತ್ತು. ಆದರೆ ಈ ನಿಮ್ಮ ದ್ವಿಪದಿ ಸದ್ಯದ ಸಂಗತಿ ಇದೆ …. ಕುಶಿಯಾಯ್ತು
ನಿನ್ನ ನೆನಪು ಕರುಣಿಸಿದ ನೋವಿನೊಂದಿಗೆ ಕಾದಾಡುತ್ತಿದ್ದೇನೆ
ಎಂದೂ ನೋವು ಸೋಲೊಪ್ಪಿಲ್ಲ, ನನಗೂ ಗೆಲ್ಲಲಾಗುತ್ತಿಲ್ಲ!
awesome lines
malathi S
awesome poem….. touching….
ತುಂಬಾ ಚೆನ್ನಾಗಿದೆ.
ವಂದನೆಗಳು.