
ಗೀತಾ ಹೆಗ್ಡೆ
ಮುಖಪುಟ ಚಿತ್ರ: ಬಾಲು ಮಂದರ್ತಿ
ತಮ ಆಸ್ರೀಗೆ
ಬೇಕನ…
ತಂಪಾಗಡ್ಡಿಲ್ಯ
ಬಿಸಿ ಚಾ ಅಕ್ಕ
ಅಯ್ಯೋ ಮಾರಾಯ್ತಿ
ಅಲ್ದೆ ಅತೆ
ಹೊರಗೆ ಹನಿ
ಹೋಗ್ ನೋಡಿದ್ಯ
ಬಿಸಲ್ಯಾಂಗಿದ್ದು
ಬಿಸಿ ಚಾ ಬೇಕ
ಕೇಳ್ತ್ಯಲ್ಲೆ.
ಹಂಗರೆ ನಿಂಗೆ
ಮಜ್ಜಿಗೆಗೆ
ಬೆಲ್ಲ ಕರಡಿ
ಕೊಡ್ಲನ….
ಗನಾ
ಜೋನಿ ಬೆಲ್ಲ ಇದ್ದು
ತಡಿ ಬಾವಿಂದ
ತಣ್ಣ್ಗಿನ್ ನೀರು
ಸೇದ್ಕಂಡ ಬರ್ತಿ.
ಅಯ್ಯೋ ಅತೆ
ಯಂಗ
ಪ್ಯಾಟೆಲ್ಲಿ ಹುಟ್ಟಿ ಬೆಳದವು
ಮಜ್ಜಿಗೆ ಬೆಲ್ಲ
ಯಂಗಂತೂ ಸೇರ್ತಿಲ್ಲ್ಯೆ
ನೊರೆ ನೊರೆ
ಲಸ್ಸೀ ಕುಡ್ದ
ಅಭ್ಯಾಸ ಆಗೋಜು.
ಹಂಗರೆ ತಮ
ತಣ್ಣ್ಗಿನ್ ನೀರು
ಮಂದ ಬೆಲ್ಲ
ಬಾಯಿಗಾಕ್ಕಂಡು
ಅದಾರು ಕುಡಿ ಅಕ್ಕ……
ಯಮ್ಮನೆ
ಭಾವಿ ನೀರು
ಚೊಲೋ ಇದ್ದು
ನೀ ಒಂದ ಸಲ
ಕುಡದ್ನೋಡು.
ಅಯ್ಯೋ ಅತೆ
ಭಾವಿ ನೀರು
ಯಂಗೊತ್ತಿಲ್ಲೆ
ಯಂಗ ಯಾವಾಗ್ಲೂ
ಕಾವೇರಿ ನೀರೆ
ಕುಡಿಯದು
ಅಕೊಗಾರ್ಡು
ಹಾಕ್ಕ್ಯಂಜ
ಗಲೀಜು ನೀರಾದ್ರೂ
ಎಷ್ಟು ಸ್ವಚ್ಛ ಆಗಿ
ಬರ್ತು ಗೊತ್ತಿದ್ದ?
ರುಚೀ ಇರ್ತು.
ಹಂಗರೆ ತಮ
ಎಂತ ಹೇಳಲೆ ಹೇಳಿ
ಯಮ್ಮನೀಗೆ ಬಂಜೆ
ಎಂತ ಕೊಟ್ರೂ
ಬ್ಯಾಡಾ ಹೇಳ್ತೆ
ಕವಳನರೂ ಹಾಕ್ತ್ಯ
ಮನೀಗ ಬಂದವು
ಎಂತ ತಗಳ್ದೆ ಹಂಗೆ
ಹೋಪಲಿಲ್ಲೆ
ಯಂಗ್ಳ
ಹವ್ಯಕ್ರ ಸಂಪ್ರದಾಯ
ತಗ ಕವಳದ ಮರಿಗೆ
ಗನಾ ಅಂಬಾಡಿ ಎಲೆ ಇದ್ದು
ಬ್ಯಾಡಾ ಹೇಳಡ.
ಅಯ್ಯೋ ಅತೆ
ಆ ಯನ್ ಮದ್ವೀಗೆ
ಕರೆಯಲ್ಲೆ ಬಂಜಿ
ಕವಳ ಹಾಕ್ಯಂಡ್ರೆ
ಬಾಯಿ ಕೆಂಪಾಗೋಕ್ತು
ಯಂಗೆ ಇದೆಲ್ಲ
ಆಗಬತ್ತಿಲ್ಲೆ.
ಹೌದನ
ಮದ್ವೀಗೆ ಕರೆಯಲ್ಲ್ ಬಂಜ್ಯ?
ಸೀ ತಿನ್ಕಂಡೇ
ಹೋಗವು
ಶಿರಾನರೂ ಮಾಡ್ತಿದ್ದಿ
ನೀ ಬ್ಯಾಡಾ ಹೇಳ್ತೆ
ನಂಗೊತ್ತಿದ್ದು
ಸಕ್ಕರೆನರೂ
ಬಾಯಿಗಾಕ್.
ಅಕ್ಕು ಅತೆ
ಹಂಗೆ ಆಗ್ಲಿ
ಸಕ್ಕರೆ ನೀರು
ಸಾಕು ಯಂಗೆ
ನಿಂಗ ಎಲ್ಲರು
ಮದುವೀಗೆ ಬರವು
ತಪ್ಪಿಸಲಿಲ್ಲೆ
ಕಾಲಿಗೆ ಬೀಳ್ತಿ
ಆಶಿವಾ೯ದ ಮಾಡು.
ಆಗ್ಲಿ ತಮ
ಇಷ್ಟಾರೂ ಬಂದ್ಯಲ….
ಯಂಗೆಂತೂ
ರಾಶಿ ಖುಷೀ ಆತು
ಮದುವೆಯೆಲ್ಲ
ಚೊಲೋ ಆಗ್ಲಿ
ಹೇಳಿ ಹರಸ್ತಿ
ಮತೆ
ಹೆಂಡತಿ ಕರಕಂಡು
ಊಟಕ್ಕೇ ಬರವು
ಹೇಳಿದ್ನಿಲ್ಲೆ ಹೇಳಡಾ.
ತಡಿ ತಮಾ
ದೇವರ ಗೂಡಲ್ಲಿ
ಅಕ್ಷತೆ ಕಾಳಿದ್ದು
ತಗಂಬತ್ತಿ ಕೂತ್ಕಂಡಿರು
ಬಾ ಹಿಡಕ ಅಕ್ಷತ
ದೇವರಿಗೆ ಹಾಕಿ
ಉದ್ದಂಡ
ನಮಸ್ಕಾರ ಮಾಡು
ಅವಂಗೆ ಮಾಡ್ರೆ ಸಾಕು
ಯಂಗೆಂತಕ?
ಜೀವನ್ದಲ್ಲಿ ಎಲ್ಲದಕ್ಕೂ
ಅವನ ಆಶೀರ್ವಾದ
ಒಂದಿದ್ರೆ ಸಾಕು!





ಪದ್ಯ ಬಹಳ ಇಷ್ಟ ಆಯ್ತು. ಪೂರಾ ಹವ್ಯಕನ್ನಡದಲ್ಲೇ ಬರೆದ ಮೊದಲ ಪದ್ಯ ಇರಬಹುದು ಇದು ಅನ್ನಿಸಿತು. ನಿಜ … ಈಗ ಮನೆಗೆ ಬಂದವರಿಗೆ ಏನು ಕೊಟ್ಟರೆ ಇಷ್ಟ ಆದೀತೋ .. ಗೊತ್ತೇ ಆಗಲ್ಲ. ಹಾಗೆ ಏನೂ ಕೊಡದೆ ಹೋದರೆ ಕೊಡಲಿಲ್ಲವೇ ,,, ಹನಿ ನೀರೂ ಕುಡಿಯದೆ ಹೋದರೇ ಅಂತ ಕೊರೆಯುತ್ತಿರುತ್ತದೆ. ಹೀಗೆ ಅಂದುಕೊಳ್ಳೋದೇ ಹಳೇ ಕಾಲ ಆಗಿ ಹೋಯ್ತೋ ಏನೋ
ನಿಜ. ಆಧುನಿಕತೆ ಕಡೆಗೆ ಜನ ವಾಲುತ್ತಿದ್ದಾರೆ. ಆದರೆ ಹಳ್ಳಿಗಳಲ್ಲಿ ಈ ಸಂಪ್ರದಾಯ ಇನ್ನೂ ಜೀವಂತವಾಗಿ ಇದೆ.
ಧನ್ಯವಾದಗಳು ಮೇಡಂ ಕವನ ಮೆಚ್ಚಿದ್ದಕ್ಕೆ.
Waaaahhh kavana ,chalo iddu, super iddu