ಎರಡು ಕವನಗಳು
ಜಯಶ್ರೀ ಬಿ ಕದ್ರಿ
ಹೊರಟಿದ್ದೇನೆ ನಾನೀಗ
ಮನೆಯನ್ನೆಲ್ಲ ತೊಳೆದು
ಒಪ್ಪವಾಗಿಸಲೆಂದು
ಪಾತ್ರೆ ಪರಡಿಗಳನ್ನು
ಹಳೆಯ ಕಡತಗಳನ್ನು
ರಾಶಿ ಪುಸ್ತಕದ
ಅಲ್ಮೇರವನ್ನು
ಸಂದಿಗೊಂದಿಗಳಲ್ಲಿ ಧೂಳುಕಸಗಳಿವೆ
ಪುಸ್ತಕದ ಮರೆಯಲ್ಲಿ ಗೆದ್ದಲಿನ ಗೂಡು

ಹಳೆಯ ಫೈಲುಗಳಲ್ಲಿ
ಬ್ಯಾಂಕು ಸಾಲದ ಪತ್ರ
ಬ್ಲಡ್ ಗ್ರೂಪು ಆಸ್ಪತ್ರೆ ಬಿಲ್ಲು
ಹಳೆಯ ಆಲ್ಬಂಗಳಲ್ಲಿ
ಹನಿಮೂನು ಟೂರುಗಳು
ಕಿರುಬೆರಳು ಹಿಡಿಯುತ್ತ
ನಡೆದು ನಲಿಯುವ ಮಗಳು
ಎಲ್ಲ ಮನೆಗಳ ಹಾಗೆ
ನನ್ನ ಮನೆಯೂ ಕೂಡ
ಯಾರ ಮನೆಯಲ್ಲಿಲ್ಲ
ಚೂರು ಕಸ ಹೇಳಿ
ಕಡಲಿಗೆ
ಕಡಲೆ ನಿನ್ನೊಡಲಲ್ಲಿ
ಮಿಸುಕಿದ್ದೆ ಮೊರೆದಿದ್ದೆ
ಉಸುಕಿನಲಿ ಹೆಜ್ಜೆಗಳು
ಅಳಿಸಿಹವೆ ಹೇಳು
ಒಡಲ ಸುನಾಮಿಗಳಲ್ಲಿ
ಉಕ್ಕು ಭರತಗಳಲ್ಲಿ
ಅಲೆಯಲೆಯ ಲಾಸ್ಯವನು
ಮರೆತು ಬಿಟ್ಟೆಯೊವನೊ

ಗಾಳಿ ಗೋಪುರಗಳಲ್ಲಿ
ಮಂಜು ಮಹಲುಗಳಲ್ಲಿ
ನಿನ್ನ ಗಂಭೀರ ಮೌನವದು
ಕೇಳಿಸಲೆ ಇಲ್ಲ
ನನ್ನ ಮೇಣದ ರೆಕ್ಕೆ
ಕರಗಿ ಸೋರಿರುವಾಗ
ನಿನ್ನ ನೀಲಿಯ ಆಳ
ಕಾಣಿಸಲೆ ಇಲ್ಲ






uttama kaaduva kavana..
chendada kavite -smitha
ಎಲ್ಲ ಮನೆಗಳ ಹಾಗೆ
ನನ್ನ ಮನೆಯೂ ಕೂಡ
ಯಾರ ಮನೆಯಲ್ಲಿಲ್ಲ
ಚೂರು ಕಸ ಹೇಳಿ
ಈ ಸಾಲುಗಳು ತುಂಬಾ ಇಷ್ಟವಾದವು ಮೇಡಂ.
kavana chennagide jayashree. kasaragodina kannada dhwani heege uliyuvudu khushiye allave?naanu mechchikonda ninna vidyarthideseya kavanagalu nenapaadavu. shubhashayagalu.
Nice poems. I really appreciate your talent.