ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಉಸಿರ ತೊಡೆಯ ಮೇಲೆ ಗಾಳಿಗೀಗ ಸುಖನಿದ್ರೆ!’ – ರೂಪ ಹಾಸನ್

ಉಸಿರ ಹೆಜ್ಜೆಗಳು

ರೂಪ ಹಾಸನ

ನಭಕ್ಕೆ ಕೈ ಎತ್ತಿ

ಮುಗಿದು ಪಿಸುಗುಟ್ಟಿದೆ

ಗಾಳಿ ರಿಂಗಣಗಳ ಮಸುಕಿನ

ಕರಾಮತ್ತಿನಲಿ

ಉಸಿರ ಗುರುತುಗಳಿಂದ

ತಪ್ಪಿಸಿಕೊಳಲಾಗದೇ

ಸಂಜ್ಞೆಯಷ್ಟೇ ತಲುಪಿತಂತೆ

ಇದು ಬರಿಯ

ಬಿದಿರ ಮೆಳೆ

ರಾಗದುಸಿರು ತುಂಬಿ

ಸ್ಪರ್ಶದಲಿ ಪಲ್ಲವಿಸಿ

ನುಡಿಯೇ ಉಸಿರಾಯ್ತು.

ಆಕಾಶದ ನಕ್ಷತ್ರ

ಮಣ್ಣಿನಲಿ ಮೊಳಕೆಯೊಡೆದು

ನೀರಿನಂತೆ ಹಿಡಿದಿಟ್ಟ ಉಸಿರು

ಆಕಾರವಿಲ್ಲದೇ

ನದಿಯಾಗಿ ಹರಿದು

ಅದರಲ್ಲಿ ಅಪ್ಪಿತಪ್ಪಿ

ಪಾದವಿಕ್ಕಿದ್ದಕ್ಕೆ

ಉಸಿರಿನ ತೇವವೇ ಹೂವಾಗಿ

ಮುತ್ತಿಕ್ಕಿಸಿಕೊಳುವ ಶಿಕ್ಷೆ!

ಇಷ್ಟಕ್ಕೇ ಮುಚ್ಚಿದ್ದ

ಎದೆಯ ಕವಾಟಗಳೆಲ್ಲ

ತೆರೆದುಕೊಂಡು

ಗಾಳಿ ಉಸಿರಾಗಿ

ಸಾವು ಸತ್ತಿತು!

ಈಗ ರೆಕ್ಕೆಗಳು ಮೂಡಿ

ನಭಕ್ಕೆ ಹಾರಿದೆ.

ಉಸಿರ ತೊಡೆಯ ಮೇಲೆ

ಗಾಳಿಗೀಗ ಸುಖನಿದ್ರೆ!

‍ಲೇಖಕರು G

31 October, 2012

1 Comment

  1. chalam

    sparshadali pallavisi…………thanks

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading