ಪರಿವರ್ತಕ
ಸುರೇಶ್ ರಾಜಮಾನೆ
ಬೆಟ್ಟಗುಡ್ಡಗಳ ನಡುವೆ ಒಂದು
ದೇವಾಲಯ, ದೇವರಿಲ್ಲ
ಎಲ್ಲಾ ದಾರಿಯ ತೋರುವ ಗುರು ಒಬ್ಬನೇ ಅಲ್ಲಿ
ಕಾಡಲ್ಲಿ ಕಗ್ಗತ್ತಲ ನಾಡಲ್ಲಿ……
ಕಲ್ಲು ಬಂಡೆಗಳನ್ನು ಕೆತ್ತಿ ಬಣ್ಣ ಮೆತ್ತಿ
ಕಣ್ಣು ಕೊಡುವನು
ಕತ್ತಲಲ್ಲಿ ಸಾಗುವ ದಾರಿಗೆ ಬೆಳಕಿಲ್ಲದವರಿಗೆ
ಸವೆಯುವ ಬದುಕಿಗೆ
ಸ್ವಂತಿಕೆಯ ಸುಗಂಧ ಸಿಗುವಂತೆ
ಹೃದಯದಿಂದ.. ಸರಸ್ವತಿ..||

ಕರಗಿದ ಶಿಲೆಗಳಲ್ಲಿ ಮನಮಿಡಿಯುವ ನುಡಿ ಕೆತ್ತಿ
ಸತ್ವ-ತತ್ವಗಳ ಪೆಟ್ಟು ಕೊಟ್ಟು
ಮುಕ್ತಿ ಮಂಟಪಕ್ಕೆ ಮಾರ್ಗತೋರುವ
ಮನುಷ್ಯರನ್ನಾಗಿಸುವ
ಮಹಿಮಾ ಮಹಿಮೆಗೆ..||
ಜಿಡ್ಡು ಗಟ್ಟಿದ ಜೇಡನ ಮನಸಲ್ಲಿ
ಸಾಕ್ಷರತೆಯ ಗೂಡುಕಟ್ಟಿ
ಅಕ್ಷರಗಳ ಕಂಬದ ಮೇಲೆ ನಕ್ಷತ್ರದಂತೆ ನಳನಳಿಸಲು
ಬದುಕಲ್ಲಿ ಹಸಿರಾಗುವನು
ಉಸಿರು ಕಟ್ಟಿದ ಉತ್ಸವದಲ್ಲಿ ಹೆಸರಿಲ್ಲದಂತೆ ಸಾಗುವ ಈತ
ಶ್ವೇತ ಮಾತಿನ ಸ್ವಾತಿ ಮಣಿ
ದೇವತಾರಾಯಭಾರಿ..||






Super agide dosth.. guruvin mahimeyannu saruva kavithe channagide.. nijakku aaath devatha rayabari…
thanq