ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಳಿದ ಮಾತು…

ಮಲ್ಲಮ್ಮ  ಜೊಂಡಿ / ಬಾಗಲಕೋಟ

ವಿನಾಕಾರಣ ನುಸುಳುವ
ಕಂಬನಿಗಳ ಸಾಲಿನಲಿ
ಜಾರಿದ ನಿನ್ನ ಬಿಂಬವನು
ಎತ್ತಿಕೊಳ್ಳುವ ಹವಣಿಕೆ
ಹೃದಯಕೀಗ ಉಳಿದಿಲ್ಲ

ನೀನಡೆದ ದಾರಿಯಲುಳಿದ
ಹೆಜ್ಜೆಯ ಗುರುತುಗಳು
ತಿರುಗಿ ನೋಡದ
ಘಳಿಗೆಯೊಳಗಡಗಿರಬಹುದು
ಕಣ್ಣನಾವರಿಸಿದ ಕಪ್ಪುವರ್ತುಲದಲಿ
ಕಾಲು ಜಾರದಿರಲಿ
ಕೊಟ್ಟುಬಿಡುವೆ
ನಿನ್ನಾಣೆ ಪ್ರಮಾಣಗಳ ಗಂಟನು
ಮುಂದೆಲ್ಲೊ  ಬಳಕೆಯಾದೀತು

ಕೊನೆಗುಳಿದೆರಡು ಪದಗಳನಾದರೂ
ಹೊರಳಿದ ನೋಟವನಾದರೂ
ತುಳಿದ ನಾಲ್ಕು ಹೆಜ್ಜೆಗಳಲಿ
ಬಂಧಿಸಿಬಿಡುವ ಹಂಬಲವೆನಗೆ

ಎಲೆಯೊಂದುರುಳಿದೊಡೆ
ಹನಿಗಣ್ಣಾಗುವ ಮರದಂತೆ
ಮಾಗಿಯಲಿ ಮಾಗುವ ಈ ಕ್ಷಣಕೆ
ನನ್ನ ಹೊಸಜಗದ ಆಮಂತ್ರಣ ನಿನಗೆ
ಜರೂರಿರಲಿಕ್ಕಿಲ್ಲ,
ತುಂಬಿದ ಖಾಲಿತನದೊಳು
ಉಳಿದ ಮಾತುಕತೆಗೆ‌ ನಾನೊಬ್ಬಳೆ‌ ಸಾಕು…

‍ಲೇಖಕರು avadhi

28 February, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading