ಉರಿವ ಮೇಣದ ಬತ್ತಿ
ಎಚ್ ಎ ಪಾಟೀಲ್

ಉರಿವ ಬತ್ತಿ ಅಕ್ಕಸದಿ
ಮೇಣಕ್ಕೆ ಹೇಳಿತು
ಉರಿಯುವುದು ನಾನು
ನೀನೇಕೆ ಕರಗುತ್ತಿ ?
ಮೇಣದ ಉತ್ತರ
ಉರಿಯುವುದು ನೀನಾದರೂ
ಇಂಧನ ನಾನು
ಕರಗದೆ ಗತ್ಯಂತರವಿಲ್ಲ
ಎರಡೂ ಕೂಡಿ
ಬೆಳಗುವ ಜ್ಯೋತಿಯ
ಬೆನ್ನು ಬಿದ್ದವು ನಿನ್ನದೆ
ಸುಖದ ಬದುಕು
ಕರಗುವವರು ಯಾರೋ
ಉರಿವವರು ಯಾರೋ
ಉರುವಣಿಗೆ ಮಾತ್ರ ನಿನ್ನದು !
ಬೆಳಕು ಅವುಗಳನ್ನು
ಸಮಾಧಾನಿಸಿತು
ಕರಗುವುದು ಉರಿಯುವುದು
ಬೆಳಗುವುದು ಒಂದು
ನಿರಂತರ ಸಂವಹನ ಕ್ರಿಯೆ
ಇಲ್ಲದಿರೆ
ಕತ್ತಲಿನದೆ ಸಾಮ್ರಾಜ್ಯ !
ನೀವಿಲ್ಲದೆ ನಾನಿಲ್ಲ
ನಾವಿಲ್ಲದಿರೆ ಜಗವಿಲ್ಲ
ಜಗವಿಲ್ಲದಿರೆ
ನಮಗೆ ಅಸ್ತಿತ್ವವಿಲ್ಲ
ಪರಸ್ಪರ ಸಹಕಾರ
ನಿಜದ ಬಾಳು ತಿಳಿಯಿರಿ
ಮೌನದಲಿ ಮೋಂಬತ್ತಿ
ಉರಿಯ ತೊಡಗಿತು





ಕವಿತೆಯಲ್ಲಿನ ವಸ್ತು ಚನ್ನಾಗಿದೆ.ಕತ್ತಲನ್ನೋಡಿಸುವ ಹಠಕ್ಕೆ ಬಿದ್ದು ತಾವೇ ದಹಿಸಿಕೊಳ್ಳುವ
ಮೇಣದ ಬತ್ತಿ,ಬೆಳಕು ತಮ್ಮ ಅಸ್ಥಿವನ್ನು ಪ್ರಶ್ನಿಸಿಕೊಂಡು ಬೆಳಗುವ ಚಿಂತನೆ ಅದ್ಬುತ.
ಬಿದಲೋಟಿ ರಂಗನಾಥರವರಿಗೆ ವಂದನೆಗಳು ಕವನದ ವಿಮರ್ಶಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು.
paatil avarige namaskaar.
uttama kavite..
ಮೇಡಂ ವಂದನೆಗಳು ಪ್ರತಿಕ್ರಿಯೆಗೆ ದನ್ಯವಾದಗಳು