ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದರಲ್ಲೇನುಳಿದಿದೆಯಮ್ಮ..

 ಅಮ್ಮನ ಸೀರೆ

ಉಮಾ ರಾವ್

ಮೊನ್ನೆ

ಕಪಾಟು ಕ್ಲೀನು ಮಾಡುವಾಗ

ಇದ್ದಕ್ಕಿದ್ದಂತೆ ಕೈಗೆ ಸಿಕ್ಕಿತು

ಅಮ್ಮನ ಸೀರೆ

 

ರಂಗುರಂಗಿನ ಸಲ್ವಾರ್ ಕಮೀಝುಗಳು

ನುಣುಪು ಗಾರ್ಡನ್ ಶಿಫಾನುಗಳು

ಗರಿಮುರಿ ಟೀ ಶರಟುಗಳು

ಛಕಛಕ ದುಪಟ್ಟಾಗಳು

ಎಲ್ಲದರ ಆಟಾಟೋಪದ ನಡುವೆ

ಮುದುರಿ ಮುದ್ದೆಯಾಗಿತ್ತು.

 

ಅಮ್ಮನ ಸೀರೆ

ಹಳೇ ದಾಗಿನ ಕಂಬಿಯವನಿಗೆ ಹಾಕಿದರೆ

ಕೇಳಿಯಾನು

ಇದರಲ್ಲೇನುಳಿದಿದೆಯಮ್ಮ

ಇದಕ್ಕೇನು ಕೊಡಲಮ್ಮ

ಹೌದು

ಬಣ್ಣ ಹೇಗಾಗಿದೆ

ಎಂದೋ ಹಸಿರಿತ್ತೇನೋ

ಇನ್ನು ಸೆರಗು

ಮೊಮ್ಮಗನ ಮೊಸರು ಬಾಯಿ

ಒರೆಸೊರೆಸಿ ತಿಂದು ಹೋಗಿದೆ

 

ಅಡಿಗೆಮನೆ ದೇವರಮನೆ

ಬಚ್ಚಲುಮನೆ ನಡುಮನೆ

ಓಡಾಟದಲಿ ಅಂಚು ಹರಿದು ಹಿಂಜಿದೆ

ಜರಿಯ ಹೊಳಪಂತೂ

ಎಂದೋ ಮಸುಕಾಗಿದೆ

ಮಸಿ ಬೇರೆ ಅಲ್ಲಿ ಇಲ್ಲಿ ಗುರುತಾಗಿದೆ

 

ಅಮ್ಮನ ಸೀರೆ

ಒಡಲೆಲ್ಲಾ ಮಾಸಿದೆ

ಬೆವರಿಗೆ ಎಣ್ಣೆ ಕಮರಿಗೆ

ಬಿಸಿಯುಸಿರಿಗೆ ಸಿಕ್ಕು ಸೊರಗಿದೆ

 

ಆದರೆ

ದಿನಕಳೆದಂತೆ ಅದರ

ಮೆತುವು ಹೆಚ್ಚಾಗಿದೆ

 

ಯಾವುದೋ

ರಸ್ತೆಯಾಚೆಯಲ್ಲಿ

ಪಾಳುದೇಗುಲದ ಕಂಬದಂಚಿನಲ್ಲಿ

ಎಲ್ಲೂ ತಲುಪದ ಹಳಿಗಳ ಮೇಲೆ

ದಿಕ್ಕೆಟ್ಟು ನಿಂತ ಒಂಟಿ ಬೋಗಿಯಲ್ಲಿ

ಮುದುರಿ ಮಲಗಿದ ಕೂಸುಗಳ

ಬೆಚ್ಚನೆಯ ಹಾಸಾಗಿದೆ.

 

‍ಲೇಖಕರು Admin

8 May, 2016

9 Comments

  1. Aravind

    Excellent.

  2. Radhika

    ammana nenapaagi kaNNeru bantu . . .

  3. Naveen

    ಅಮ್ಮನ ಮಡಿಲು ನೆನಪಾಗಿ ಕಣ್ಣೀರು ತರಿಸಿದೆ,,,, ಈ ಭಾವ ಅದ್ಭುತ,,, ಒಳ್ಳೆಯ ಬರಹ ಉಮಕ್ಕ,,,,

    -ಜೀ ಕೇ ನ

  4. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ , ಪದ್ಯ.

  5. Ahalya Ballal

    ಕೊನೆಯ ತಿರುವು…ಆಹಾ!

  6. mmshaik

    touchy…!!

  7. Anil Talikoti

    ಚೆನ್ನಾಗಿದೆ

  8. girijashastry

    very touching

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading