ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಉಡಿಯಲ್ಲಿ ಸೂರ್ಯನನ್ನು ಕಟ್ಟಿಕೊಂಡೆ ಬದುಕಿದವರು ..’

ಅಮ್ಮಂದಿರು..

– ಎಂ ಎಂ ಶೇಕ್ ಯಾದಗಿರಿ

ಈ ಅಮ್ಮಂದಿರೆ ಹೀಗೆ ….. !
ಉಡಿಯಲ್ಲಿ ಸೂರ್ಯನನ್ನು
ಕಟ್ಟಿಕೊಂಡೆ ಬದುಕಿದವರು ..
ಚಂದ್ರನನ್ನು ಅವರು ಬಯಸಲೇ ಇಲ್ಲ !!!
 
ಬೆವರ ಹನಿ ತುಳುಕಿಸುತ್ತಾ
ನೆಲವನ್ನು ಉತ್ತುತ್ತಿದ್ದಿದ್ದು
ತೆನೆ ಕಟ್ಟುತ್ತಿದ್ದಿದ್ದು .. !!
 
ಎಷ್ಟೆಲ್ಲಾ ಆದರೂ
ಹರಕೆ ಹೊತ್ತು ಗಂಡುಗಳನ್ನು
ಹಡೆಯುವವರು ..
 
ಅವರ ಜಗತ್ತಲ್ಲಿ ಕೇವಲ
ನಾವೇ ನಾವು..
ಹೀಗೆಂದು ಇಡೀ
ಜಗತ್ತನ್ನು ಆಳಿದವರು..!!
 
ಮಣ್ಣಿನ ಈ ಘಮಲು
ಅವರದೇ ..
ನಮಗಾಗಿ ಬಿಟ್ಟು ಹೋದವರು..!
 
 

‍ಲೇಖಕರು avadhi

13 May, 2013

7 Comments

  1. ಪ್ರಕಾಶ ಬಿ. ಜಾಲಹಳ್ಳಿ

    kavite chennagide.

  2. chalam

    ನಮಗಾಗಿ ಬಿಟ್ಟು ಹೋದವರು..!
    ನಿಜ ಅವರು ನಮಗಾಗಿ ಬಿಟ್ಟುಹೋಗುವವರು.ಅಮ್ಮಂದಿರಿಗೆ ನಿಮ್ಮ ಕಡೆಯಿಂದ ಮತ್ತೊಮ್ಮೆ ನಮನ.

  3. keshava reddy handrala

    jagattinalli AMMA AMMANIGE MAATRA SAATI

  4. ಶಿವಾನಂದ ಕುಬಸದ

    ಸುಂದರ ಕವನ. “ಉಡಿಯಲ್ಲಿ ಸೂರ್ಯ” “ಹರಕೆ ಹೊತ್ತು ಗಂಡುಗಳನ್ನು ಹಡೆಯುವವರು” ಒಳ್ಳೆಯ ಸಾಲುಗಳು. ಅಭಿನಂದನೆಗಳು

  5. D.Ravivarma

    ಮಣ್ಣಿನ ಈ ಘಮಲು
    ಅವರದೇ ..
    ನಮಗಾಗಿ ಬಿಟ್ಟು ಹೋದವರು..!,,aptavaada bhaavanegalu….

  6. mmshaik

    ellarigU dhanyavaada…

  7. Kajooru sathish

    Chennaagide sir.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading