ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಮೆನೋಪಾಸಿನ ಸುಡುಹಗಲಿನಂತಹ ದಿಗಿಲು..

 

 

 

 

ಎನ್ ಪಾರ್ವತಿ

 

 

 

 


ಮೆನೋಪಾಸಿನ
ಸುಡುಹಗಲಿನಂತಹ
ನಡುಗಾಲದ ದಿನಗಳಲ್ಲಿ
ನಾನೊಂದು ಛಿದ್ರವಾದ
ಮತ್ತೆ ಒಂದುಗೂಡಿಸಲಾಗದ
ಹರಿದ ಚಿತ್ರದಂತೆ ಭಾಸವಾಗಿ
ನೆತ್ತಿ ಸುಟ್ಟು
ದಿಕ್ಕುಗೆಟ್ಟು
ದಿಗಿಲುಗೊಂಡ ಕ್ಷಣಗಳಲ್ಲಿ
ನಿನ್ನ ಮಡಿಲ
ಮಗುವಾಗಿಬಿಡಬೇಕೆಂಬ ತವಕ
ಹೆಚ್ಚಿಬಿಡುತ್ತದೆ ಕಣೋ ಇನಿಯಾ..

ಒಮ್ಮೆ ನಿರಾಳವಾಗಿ
ಉಸಿರಾಡಿ ನಾನಿನ್ನೂ
ಇಡಿಯಾಗಿರುವುದನ್ನು
ಖಾತ್ರಿಮಾಡಿಕೊಳ್ಳಬೇಕಿದೆ
ಹುಡುಗ
ನಿನ್ನ ಮಡಿಲಲ್ಲಿಷ್ಟು
ಜಾಗವನ್ನು ನೀಡು

ನನಗೆ ನಾನೇ
ಇಷ್ಟವಾಗದ ಘಳಿಗೆಯಲ್ಲೂ
ನನ್ನನ್ನು ಇಡಿಯಾಗಿ
ಪ್ರೀತಿಸಿದವನು ನೀನಲ್ಲವೇನು?
ತಡಬಡಾಯಿಸದೆ
ತಡಮಾಡದೇ
ಅಪ್ಪಿ ಸಂತೈಸಿಬಿಡು
ಬದುಕಿಬಿಡುತ್ತೇನೆ ಮತ್ತೊಮ್ಮೆ

 

‍ಲೇಖಕರು Avadhi GK

20 January, 2018

3 Comments

  1. Sudha ChidanandGowd

    ನನಗೆ ನಾನೇ ಇಷ್ಟವಾಗದ ಗಳಿಗೆಗಳು…

    Yes, that’s it…!
    ತುಂಬ ತುಂಬ ಚೆನ್ನಾಗಿ ಮೂಡಿಬಂದಿದೆ ಕವಿತೆ.
    ವಾಸ್ತವ ಮತ್ತು ಭಾವುಕತೆಗಳ ತೂಗುಯ್ಯಾಲೆಯಲಿ
    ಆಸರೆಯಾಗಿ ನಿಲ್ಲುವುದು ಪ್ರೀತಿಯೊಂದೇ ತಾನೇ.!?

  2. ಎನ್ ಪಾರ್ವತಿ

    ಥ್ಯಾಂಕ್ಯು ಸುಧಾ ಜೀ 🙂

  3. ಸಂಧ್ಯಾರಾಣಿ ಪಿಎಸ್

    ಧ್ವನಿ ಪೂರ್ಣ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading