ಎಲ್ಲಿ ಮರೆಯಾದೆ!?
ನಿಶಾ ಗೋಪಿನಾಥ್
ನನ್ನ
ಕನಸಿನ ಮೊಗ್ಗೊಂದು
ಹೂವಾಗಿ ಅರಳಿದೆ…
ಕುಗ್ಗಿದ್ದ ಮನಸಿಂದು
ಹಿರಿ ಹಿರಿ ಹಿಗ್ಗಿದೆ…
ನೀನೆ, ನೀನೆ
ಈ ಸ್ಥಿತಿಗೆ ಕಾರಣ…
ನಿನ್ನಿಂದ ಈ ಬಾಳು
ಸಿಹಿ ಹೂರಣ…
***
ಮರುಭೂಮಿಯಲಿ
ಓಯಸೀಸು ಸಿಕ್ಕಂತಾಯಿತು
ನಿನ್ನ ಈ ಪ್ರೀತಿ…
ಹೋಗುತಿರುವ ಜೀವ
ಮತ್ತೆ ಮರಳಿ ಬಂದಂಥ
ಅನುಭವದ ರೀತಿ…
***
ನಿನ್ನ ಕಾಣದೆ
ಸೋತಿದೆ ನನ್ನ ಮನ
ಬಾಡಿದೆ ಮೊಗವು
ಮರೆಯಾದ ನಿನ್ನ ನಗುವು
ಸ್ಮರಿಸಿದೆ ಆ ಒಲವ
ಕಣ್ಣ ಮುಂದೆ ಬಾರೋ
ನಿತ್ಯ ನನ್ನ ಚೆಲುವ
***
ಭಾವನೆಗಳಿಗೆ
ಬಣ್ಣ ಹಚ್ಚಿದವ ನೀನು
ಈ ಮನದ ಚಿಟ್ಟೆಗೆ
ಹಾರುವುದ ಕಲಿಸಿದವ ನೀನು
ಮಂಜಿನ ಮಳೆಯಲಿ
ಸದಾ ನನ್ನ ಜೊತೆ ಜೊತೆಯಲಿ
ಮನಸಿನಲ್ಲಿ ಕನಸು ಬೆರೆಸಿ
ಹಾಲಿನಂಥ ಬೆಳದಿಂಗಳ ಸುರಿಸಿ
ಬಾಳು ಹಸನಾಗಿಸಿದವ ನೀ…
ಇಲ್ಲಿ ಬರದೆ
ಎಲ್ಲಿ ಮರೆಯಾದೆ?






Good effort….very nice ….sundara pada punjagalige nimma adbhutha kalpaneya eraka hachchiddeeri.Abhinandanegalu… Bhavanegalige Banna hachchidava Neenu…E manada chittige haruvuda kalisidava neenu….Manjina maleyalli…Manasinalli kanasu beresi…..Halinantha Beladingala surisi……..nijakku adbhutha kalpana lokadalli viharisiddiri…Mattomme abhinandanegalu hagu innu hechchu hechchu sundara kavanagalu nimminda nirantaravagi horabaruttirali.
ನಿನ್ನ ಕಾಣದೆ
ಸೋತಿದೆ ನನ್ನ ಮನ
ಬಾಡಿದೆ ಮೊಗವು
ಮರೆಯಾದ ನಿನ್ನ ನಗುವು
ಸ್ಮರಿಸಿದೆ ಆ ಒಲವ…
ಕವಿತೆ ಚೆನ್ನಾಗಿದೆ. ಇಡೀ ಕವನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹೀಗೇ ಹೊಸ ಹೊಸ ವಿಚಾರಗಳನ್ನು ನಿಮ್ಮ ಕವಿತೆ ಆವರಿಸಿಕೊಳ್ಳಲಿ…
ಮನಮೋಹಕ, ಮನದಲ್ಲಿ ಕಾಡುವ ಪ್ರಸ್ನೆಗಳೇ ಇಲ್ಲಿ ಸಾಲುಗಳು..ವಿರಹ, ತನ್ಮಯತೆ, ಪ್ರೇಮಿಯ ಜೊತೆಗಿರುವ ಅನುಬಂಧ, ಭಾವನಾತ್ಮಕತೆ ಸೇರಿ ಈ ಕವಿತೆ ಜೀವ ಪಡೆದಿದೆ ಅನಿಸುತ್ತೆ…ಮುಂದೆ ಇನ್ನೂ ಉತ್ತಮವಾದ ಸಾಹಿತ್ಯ, ಕವಿತೆ ತಮ್ಮಿಂದ ಹೊರಬರಲಿ ಎಂದು ಹಾರೈಸುತ್ತೇನೆ….
ಗಿರೀಶ ಜೋಷಿ ಮಾನ್ವಿ
ಸಂಪಾದಕರು
ವಿಜಯಧ್ವಜ ಕನ್ನಡ ಪಾಕ್ಷಿಕ
ಜಿಲ್ಲೆ.ರಾಯಚೂರು
khare bandare, purushara shoshane ennuttiri!
padagala jodane tumba arthapuranavegide. heege sunadar kavanagalu nimminda nirantaravagi horabaruttirali……