ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಬೇಗೆಯೂ ಬೇಕು ಬಿಡು ನಿನ್ನಂತೆ

ಕೆಲವು ಹನಿಗವನಗಳು

– ಮಯೂರಿ

  ಚುಕ್ಕಿ ಮೂಡುವ ಹೊತ್ತಿನಲ್ಲಿ ನನ್ನೊಳಗೆ ಮಿಣುಕು ಹುಳು ಜೀವ ಪಡೆಯುತ್ತವೆ ಕತ್ತಲಲ್ಲಿ ಬಿದ್ದ ಕಣ್ಣಹನಿ ಉರಿದಂತೆ ಮತ್ತೆ ಉದುರುತ್ತವೆ ಈ ಜಗದ ಬೇಗುದಿ ದೊಡ್ಡದು ಯಾವ ಸುದ್ದಿ ಯಾರು ತಂದರೋ ತಿಳಿದಿಲ್ಲ ಬತ್ತಿದ ಕೆರೆಯ ಬಿರಿದೆದೆಯ ಶೋಕಸಭೆಗೆ ನಾವಿಂದು ಕರೆಯದೇ ಬಂದ ಅತಿಥಿ ನೆತ್ತಿಯ ಮೇಲೆ ಹಾರುತಿದೆ ಯಾರದೋ ನಗು ತುಂಬಿದ ವಿಮಾನ ಅಳುವ ಮಗುವಿನ ಕೈಯಲ್ಲಿನ ನಗುವ ಗೊಂಬೆಯಂತೆ ನೀನು ಕೋಗಿಲೆಯೊಳಗಿನ ಕೊಳಲು ಆಲದ ಬಿಳಲು ಮುತ್ತಿರುವ ಎಲೆಯ ಕುಕಿಲು ನೇಣು ಬಿಗಿದುಕೊಳ್ಳಲು ಬಂದ ಅನ್ನದಾತನ ಅಳಲೂ 4 ಬರದ ನೆಲದ ಬೆಂಕಿ ಹೂ ಹೇಗೆ ಮುಡಿಯುವುದು ಖಾಲಿ ಹೊಟ್ಟೆ ಉರಿವ ಕೊಂಡ ನೀರು ಬತ್ತಿದ ಕಣ್ಣು ಯಾರೋ ಬಿಟ್ಟ ಬಾಣ ಕಂಡ ಮೋಡಗಳೆಲ್ಲ ಕೆಂಡದುಂಡೆಗಳೇ ಈ ಬೇಗೆಯೂ ಬೇಕು ಬಿಡು ನಿನ್ನಂತೆ]]>

‍ಲೇಖಕರು G

13 May, 2012

1 Comment

  1. Vikram Hathwar

    Very intense. Liked it.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading