ಈ ನನ್ನ ಸ್ಕೂಟರ್ ನನ್ನ ದೇಶದಂತೆ
ಓಡಲು ಹಂಬಲಿಸಿ ಕೆಡುತ್ತಲೇ ಇರುತ್ತದೆ.
ಗುಜುರಿಗೆ ಹಾಕಿ ನಿಟ್ಟುಸಿರು ಬಿಡಲು ಆಗುವುದಿಲ್ಲ
ಈ ನನ್ನ ಸ್ಕೂಟರ್ ಈ ನನ್ನ ದೇಶ ನಿನ್ನೆ ಮೊನ್ನೆಯದ್ದಲ್ಲ
ಅಂದುಕೊಂಡೆ ರಿಪೇರಿ ಮಾಡಿಸುತ್ತಲೇ ಇರುತ್ತೇನೆ.
ಎರಡು ಕಾಲಿನಿಂದ ಅದುಮಿ ಎಷ್ಠೇ ನಿಯಂತ್ರಿಸಿದರೂ
ಚಕ್ರಗಳು ನಿಲ್ಲುವುದೇ ಇಲ್ಲ
ಎರಡು ಕೈಯಿಂದ ಬ್ರೇಕ್ ಹಿಡಿದು
ಕಾಲುಗಳನ್ನು ನೆಲಕ್ಕದುಮಿ ನಿಲ್ಲಿಸಿದರೂ
ಮತ್ತೆ ಓಡಿಸಲು ಅದೆಷ್ಟು ಒದೆಯಬೇಕು
ನಾನು ಒದೆಯುವುದು
ಸ್ಕೂಟರ್ ಒದೆಸಿಕೊಳ್ಳುವುದು
ಅದೆಷ್ಟು ಆರಾಮಾಗಿದ್ದೇವೆ.
ಈ ನನ್ನ ಸ್ಖೂಟರಗೆ ಮೇವು ಹಾಕುತ್ತಲೇ ಇರುತ್ತೇನೆ
ತಿಂದಷ್ಟು ಕಣ್ಣೇ ಬಿಡುವುದಿಲ್ಲ
ಗುಂಡಿ ಗೊಟರಿಗಿಲಿದು, ದಿಬ್ಬಕ್ಕೇರಿ ಸಮನೆಲದಲ್ಲಿ
ನೆಡೆಸಲು ಅದೆಷ್ಟು ತ್ರಾಸು ವಹಿಸಬೇಕು
ಈ ನನ್ನ ಸ್ಕೂಟರ್ ಮನಸಿನ ಅವಲೋಕನಕ್ಕೆ
ಅದೆಷ್ಟು ರಿಪೇರಿಕಾರರು ಬಂದು ಹೋಗಿದ್ದಾರೆ
ಒಬ್ಬೊಬ್ಬರದು ಒಂದೊಂದು ದೂರು
ಇಂಜಿನ್ ಬದಲಾಯಿಸಿ
ಗ್ರೀಸ್ ಅಚ್ಚಿ ,ಅಯಿಲ್ ಹಾಕಿಸಿ
ಬ್ರೇಕ್ಕಿಲ್ಲ, ಹೆಡ್ ಲೈಟಿಲ್ಲ ಇಲ್ಲ
ಹೀಗೆ ಹೀಳಿದ್ದನ್ನೆಲ್ಲ ಮಾಡಿಸುತ್ತೆನೆ
ಹೌದು ಈ ನನ್ನ ಸ್ಕೂಟರ್ ನನ್ನ ದೇಶದಂತೆ
ಓಡಲು ಹಂಬಲಿಸಿ ಕೆಡುತ್ತಲೇ ಇರುತ್ತದೆ
ಈ ನನ್ನ ಸ್ಕೂಟರ್ ನನ್ನ ದೇಶದಂತೆ…
ನಿಮಗೆ ಇವೂ ಇಷ್ಟವಾಗಬಹುದು…






Nice 🙂
channagide
Holike chennagide hage kavanavu saha