ಮರುಳಸಿದ್ದಪ್ಪ ದೊಡ್ಡಮನಿ
ಅಸೂಯೆ ತುಂಬಿ ತುಳುಕುತಿದೆ ಈ ಜಗದಲಿ ಗೆಳೆಯ
ಸಹ ಬಾಳ್ವೆ ಮರೆಯಾಗುತಿದೆ ಈ ಜಗದಲಿ ಗೆಳೆಯ
ನೋವಿಗೆ ಸಂತೈಸುವ ಮನಗಳಿಲ್ಲ ಬರಿ ರಕ್ಕಸತನದ ಆಡಂಬರ
ನಿಜ ಬಣ್ಣ ಬಯಲಾಗುತಿದೆ ಈ ಜಗದಲಿ ಗೆಳೆಯ
ಹರಿಯುವ ನಿನ್ನ ಕಣ್ಣಿರ ಕೊಡಿಗೆ ಲೆಕ್ಕವಿಲ್ಲ
ನಾಳೆಗಳ ಕನಸು ಕಮರಿ ಬಾಡುತಿದೆ ಈ ಜಗದಲಿ ಗೆಳೆಯ

ಹೊಸ ಭರವಸೆಯು ನುಚ್ಚು ನೂರಾಗಿ ಬಿದ್ದಿವೆ
ತಲ್ಲಣಕೆ ಮನಸು ಅರಳುವುದ ಮರೆಯುತಿದೆ ಈ ಜಗದಲಿ ಗೆಳೆಯ
ನಂಜು ಕುಡಿದು ಹೇಗೆ ಬಾಳಲಿ ಮರುಳ
ವಿಷ ಕಂಠನಾಗಿ ನಾನು ಬದುಕಬೇಕಿದೆ ಈ ಜಗದಲಿ ಗೆಳೆಯ






0 Comments