- ರಾಜು ಹೆಗಡೆ
ನನ್ನ ರೇಜಿಗೆ ಹುಟ್ಟಿಸುವ
ಕನಸಿನ ತೋಟದಲ್ಲಿ
ನಿನ್ನ ನಗ್ನ ರೂಪಗಳು
ಬಾಡುತ್ತಿರುವ ಗಿಡ
ಹಾಡ ಹಂಬಲಿಸುತ್ತದೆ
ಕಣ್ಣಲ್ಲಿ ಸ್ವಲ್ಪ
ಹೂವು ಅರಳುತ್ತದೆ
ಗಟ್ಟಿಯಾಗಿ ಹಿಂಡಿದರೆ
ಹನೀ ರಸ
ಅದನ್ನೇ ಉದ್ದಕ್ಕೆ
ಹಾಸಿ ಮಲಗಿದ್ದೇನೆ
ಕಂಬಳಿ ಹುಳವಾಗಿರುವ
ನಾನು ಚಿಟ್ಟೆಯಾಗಲಿಕ್ಕಿಲ್ಲ
ಆದರೆ
ಯಾವುದೊ ಗಾಳಿ
ಮೋಡವ ತಂದು
ಮಳೆಯಾಗಬಹುದು
ಎAಬ ಮಿಣುಕು
ಆ ತೋಟದಲ್ಲಿ, ಆ ಗಿಡದಲ್ಲಿ
ಈಗಲೂ ಆಡುತ್ತದೆ.






ಈ ಕವಿತೆ ಸೊಗಸು.