ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಈಗ ನನ್ನ ಕಣ್ಣ ತುಂಬಾ ನೀರ ಪಸೆ…’ – ಶ್ರೀದೇವಿ ಕೆರೆಮನೆ ಕವನ

ಲಾಲಸೆ

ಶ್ರೀದೇವಿ ಕೆರೆಮನೆ


ನೀನು ಇಷ್ಟ ಪಟ್ಟೆ ಎಂದು
ಮೊಲೆ ತೊಟ್ಟಿಗೆ ಕಹಿಬೇವು ಲೇಪಿಸಿ
ಮಗುವಿನ ಹಾಲು ಬಿಡಿಸಿದೆ
ಹಾಲು ಕಟ್ಟಿದ ಮೊಲೆಗೀಗ
ಬಾವು ಬಂದಿದೆ
 
ಬಚ್ಚಲಿನ ಚಿಲಕ ಹಾಕಿ
ಕಷ್ಟಪಟ್ಟು ಹಾಲು ಹಿಸುಕಿ
ಅನಾಥವಾಗಿ ಚೆಲ್ಲಿ ಮೇಲೊಂದಿಷ್ಟು
ಬಿಸಿನೀರ ಶಾಕ ಕೊಟ್ಟು
ಬಿಸಿಯಾದ ನಿಟ್ಟುಸಿರಿಟ್ಟು
ಮಲಗಲೆಂದು ಬಂದರೆ…
ನಿನ್ನ ಪಕ್ಕದಲ್ಲಿ ಮಲಗಿದ್ದ ಮಗು
ಕನಸಿನಲ್ಲೂ ಹಾಲು ಕುಡಿದಂತೆ
ಬಾಯಿ ಚಪ್ಪರಿಸುತ್ತಿದೆ
 
ಈಗ,
ನನ್ನ ಕಣ್ಣ ತುಂಬಾ ನೀರ ಪಸೆ
ಜೊತೆಗೆ ನಿನ್ನ ಕಣ್ಣಿನಲ್ಲೂ…..
 
 
 

‍ಲೇಖಕರು avadhi

27 August, 2013

9 Comments

  1. nagraj.harapanahalli

    ಇದು ಬರೀ ಕವಿತೆಯಲ್ಲ…ಹೆಣ್ಣಿನ ಚರಿತ್ರೆಯೂ ಕೂಡಾ.

  2. mmshaik

    heart touching..very very nice..

  3. shanthi k.a.

    so so nice

  4. usha phatak

    ಕಣ್ಣ ನೀರಿನ ಪಸೆಯ ಅಮ್ಮನಿಂತೇಕಾದಳೋ.. ಸಹಜ ಧರ್ಮವ ತ್ಯಜಿಸಿ!
    ಮನ ಕಲಕುವ ಕವನ..
    ಉಷಾ ಫಾಟಕ್

  5. vijayanalini

    shridevi,hennina sankatagalu onderadalla…ella anusankatagale….edehinduva abhivyakthi…vnalini

  6. raju hegde

    best ide – raju hegde

  7. lakshmishankarjoshi

    nanna kannalu neera hani.adella mugidu hoda kanasinante.

  8. Anonymous

    thank you all

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading