ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗ ಆ ಘಟನೆ ನೆನಪಾಗುತ್ತಿದೆ..

ಎಚ್ ವಿ ವೇಣುಗೋಪಾಲ್ 

ವಿಪರ್ಯಾಸ : ಎಸ್.ಎಲ್.ಭೈರಪ್ಪನವರು ‘ಪರ್ವ’ ಕಾದಂಬರಿಯನ್ನು ಬರೆದು ನಲವತ್ತು ವರ್ಷ ಆಯ್ತಂತೆ.

ನಾನು ಗೌರೀಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದಾಗ ಮಹಾಭಾರತದ ಪ್ರಸಂಗಗಳನ್ನು ಪಾಠಮಾಡುತ್ತಿದ್ದಾಗ ಪ್ರಾಸಂಗಿಕವಾಗಿ ’ಪರ್ವ’ ಕಾದಂಬರಿ ಭಾಗಗಳನ್ನು ವಿವರಿಸುತ್ತಿದ್ದೆ.

ಅಲ್ಲಿನ ಆರ್.ಎಸ್.ಎಸ್. ಗುಂಪಿನ ಕೆಲ ನನ್ನದೇ ವಿದ್ಯಾರ್ಥಿಗಳು ನನ್ನ ತರಗತಿಗೆ ನುಗ್ಗಿ ನನ್ನ ಪಾಠವನ್ನು ಅಡ್ಡಿಪಡಿಸಿದ್ದೇ ಅಲ್ಲದೇ ನನ್ನನ್ನು ಹೊಡೆಯಲು ಮುಂದಾಗಿತ್ತು.

ಆಗ ಬರೇ ತಳ್ಳಾಟದ ಉಪಟಳ ಮಾತ್ರ ಅನುಭವಿಸಿದ್ದೆ.

ಈಗ ಆ ಘಟನೆ ನೆನಪಾಗುತ್ತಿದೆ.

ಅದೇ ವಿದ್ಯಾರ್ಥಿಗಳು ಈಗ ಸಿಕ್ಕರೆಹೇಗೆ ಪ್ರತಿಕ್ರಯಿಸುತ್ತಾರೋ.

ಭೈರಪ್ಪನವರ ‘ಪರ್ವ’ವನ್ನು ಮೆಚ್ಚಿ ಅದನ್ನು ಗದ್ದುಗೆಮೇಲಿಟ್ಟು ಪೂಜೆ ಸಲ್ಲಿಸಿ ಮೆರವಣಿಗೆ ಮಾಡುತ್ತಾರೋ ಏನೋ ?

ವಿಪರ್ಯಾಸ.

‍ಲೇಖಕರು avadhi

13 January, 2020

1 Comment

  1. T S SHRAVANA KUMARI

    ಬದಲಾದ ಸನ್ನಿವೇಶ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading