ಸಾಫ್ಟ ವೇರ್ ಸ್ವಗತ
ನಾಗರಾಜ್ ಹರಪನಹಳ್ಳಿ
ನಾಜೂಕು ದೇಹಕ್ಕೆ ತೊಡಿಸಿದ ಬಟ್ಟೆ
ಹರಿದು ಹೋಗಿದೆ
ಕೋಣೆಯ ಟೇಬಲ್ ಮೇಲಿನ
ಪೋಟೋ ಅಣಕಿಸುತ್ತಿದೆ
ಅಡುಗೆ ಮನೆಯಿಂದ ಹೊರಬಿದ್ದು ಬಂದೆ
ಕಾಂಕ್ರೀಟ್ ಕಾಡಿನ ನಗರ
ಗರ ಬಡಿದಂತಿದೆ ಯಾರ ಅಳುವು
ಯಾರ ಕರುಳನ್ನು ಕರಗಿಸುವುದಿಲ್ಲ
ಸಾಫ್ಟ್ ವೇರ್ ಮುಂದೆ ಕುಳಿತು
ಬಿಕ್ಕಳಿಸುತ್ತಿದ್ದೇನೆ ನೈಟ್ ಶಿಫ್ಟ್ ;ರುಟೀನ್ ಡ್ಯೂಟಿ
ಗಳಿಂದ ಸಾಕಾಗಿ ಶಾಪ ಹಾಕುತ್ತಾ ಮಲಗಿದ್ದೇನೆ
ಆದರೂ ಬದುಕಿಗೆ ಬೆನ್ನು ಹಾಕುವಂತಿಲ್ಲ
ಈಗೀಗ ಹಗಲು ರಾತ್ರಿಗಳು ಒಂದಾಗಿವೆ
ರಾತ್ರಿ ದುಡಿ ಹಗಲು ಮಲಗು ಎಂದಾಗಿದೆ
ಭಾವನೆಗಳು ಸತ್ತಂಗೆ
ಆಕೆ ನಿರ್ವಕಾರದಿಂದ ಹೇಳಿದ್ದು
ಅಕ್ಕಪಕ್ಕದ ರೂಮ್ ಗಳಿದ್ದರೂ
ಮಧ್ಯೆ ಗೋಡೆಯಿದ್ದರೂ
ಬದುಕು ಭಿನ್ನವಾಗೇನಿಲ್ಲ
ಎರಡುಕೋಣೆಗಳ ನಿಟ್ಟುಸಿರು ಸಾಫ್ಟ್ ವೇರ್
ಗಳಲ್ಲಿ ಮಿಸುಕುತ್ತಿದೆ
ಟೇಬಲ್ ಮೇಲೆ ಬಿದ್ದರೂ
ನಮ್ಮನ್ನೇ ಅಣಕಿಸುತ್ತಿದೆ ಎಟಿಎಂ
ನಾಳೆ ಊರಿಗೆ ಹೊರಟೆ
ಒಂದ ವಾರ ರಜೆ ಒಂಥರಾ ನೆಮ್ಮದಿ
ಅಪ್ಪ ತೀರಿಹೋಗಿ ಬರುವ ಹದಿನೆಂಟಕ್ಕೆ ಒಂದ್ವರ್ಷ
ನಾನೇ ಎಲ್ಲಾ ಈಗ ನಮ್ಮಮ್ಮನಿಗೆ
ಅಜ್ಜಿ ಅಕ್ಕನಿಗೂ; ಬಯಲಿಗೆ ಬಿದ್ದಾಗಿದೆ
ಚಳಿಯೇನು ? ಮಳೆಯೇನು?
ಅವಳು ನೇವರಿಸಿದಾಗ
ಆತ ಉವಾಸಿಚಿದ …..






Nice
ತುಂಬಾ ಚೆನ್ನಾಗಿದೆ.