ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಇಷ್ಟೆಲ್ಲಾ ಆದ ಮೇಲೂ ಒ೦ದೊಮ್ಮೆ ನೀ…’

ಕೈ ಬೀಸಿದ ನ೦ತರ – ಕೆ ಎಸ್ ಅಪ್ಪಣ್ಣ ನಿನ್ನ ನೆನಪಿನ ಹುತ್ತ ಕಟ್ಟುತ್ತಿದೆ ಸುತ್ತ.. ಹೂತು ಹೋಗುತ್ತಿದ್ದೇನೆ ನಾ ಜಗವ ಮರೆತು…. ಇದ್ದ ಕನಸುಗಳಷ್ಟೂ.. ಸುಟ್ಟು ಬೂದಿಯಾಗಿವೆ… ನೆನಪೊಂದೇ ನಿನ್ನ ಕುರಿತು…. ಎದೆಯಾಳದಲ್ಲಿ ಇರಿಯುತ್ತಿದೆ.. ಹಿಮಗಟ್ಟಿದ ನಿನ್ನ ನೆನಪಿನಲಗು… ರಕ್ತ ಸೋರುವ ಹೃದಯ ಹೊರಗೆ ಕಾಣಿಸುತ್ತಿಲ್ಲ.. ಚೆಲ್ಲಿಕೊಂಡಿದ್ದೇನೆ..ಮೇಲೆ ಮುಗುಳುನಗು.. ಸುಮ್ಮನಾಗಿದ್ದೇನೆ ನಾನು… ಮಾತು ಮರೆತ್ತಿದ್ದೇನೆ.. ಅಳುತ್ತಲೂ ಇಲ್ಲ ಕೊನೆಗೆ.. ಕೊನೆಯದಾಗಿ ಕಣ್ತುಂಬಿಕೊಂಡ ನಿನ್ನಬಿಂಬ…. ಕರಗಿಹೋದರೇನು ಗತಿ -ಯೆಂಬ ಭಯ ನನಗೆ.. ಇದ್ದ ಆಸೆಗಳೆಲ್ಲ.. ಕಳೆದುಹೋಗಿವೆ ಎಲ್ಲೋ… ಬೇಸರಿಕೆ ಬಲುಭಾರ.. ಬೇಕೆನಿಸುತ್ತಿಲ್ಲ…ಬೆಳಕೂ.. ಮುಗಿಸಿಬಿಡುವಾಸೆ..ಎಲ್ಲ ಲೆಕ್ಕಗಳ ಹೊರಟುಬಿಡುವಾಸೆ..ಮಾತುಮುಗಿಸಿ.. ಸಾಕೆನಿಸಿದೆ ಬದುಕು.. ಆದರೂ ತಡೆಯುತ್ತಿದೆ ಮತ್ತದೇನೋ ಬಂಧ ಹೇಳತಿಳಿಯದ ರೀತಿ….. ಇಷ್ಟೆಲ್ಲಾ ಆದಮೇಲೂ ಒಂದೊಮ್ಮೆ ನೀ ಮರಳಿ ಬರುವಿಯೇನೋ ….. ಎಂಬ ಹುಚ್ಚು ಭ್ರಾಂತಿ..  ]]>

‍ಲೇಖಕರು G

30 June, 2012

2 Comments

  1. ರವಿ ಮೂರ್ನಾಡು, ಕ್ಯಾಮರೂನ್.

    ಕಳೆದು ಕೊಂಡಿದ್ದೇನೆ… ಅನ್ನುತ್ತಲೇ ಕವಿತೆ ಮುಗಿದುಬಿಡುತ್ತಿದೆ ಅಂದು ಕೊಂಡಿದ್ದೆ. ಅಲ್ಲಿಗೆ ಒಂದು ಆತ್ಮ ವಿಶ್ವಾಸ ಇಲ್ಲದಾಯಿತು ಅನ್ನುವಾಗಲೇ “ಆದರೂ ತಡೆಯುತ್ತಿದೆ” ಅನ್ನುವ ಭಾವ ವಿಶ್ವಾಸವನ್ನು ಹಿಮ್ಮಡಿಗೊಳಿಸಿತ್ತು. ಕವಿತೆಯ ಆಶಯದಲ್ಲಿ ಉತ್ತಮ ಭಾವ ಸಮೀಕರಣಗಳು ಗೋಚರವಾಗುತ್ತಿವೆ. ಹುಚ್ಚು ಭ್ರಾಂತಿಯ ಮಾತನ್ನು ಇನ್ನಷ್ಟು ತಗ್ಗಿಸಬೇಕು ಅನ್ನಿಸಿತು

  2. Pranathi

    It’s so situational for me ! KaLedukondiddene avaLanna – jotege nambikeyannu !
    Badhuku asaadhya – asahya annisodu inta kshaNagaLalle.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading