ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಷ್ಟು ಬೇಗ ಬರಬೇಕಿತ್ತೆ ಬಿರುಬೇಸಿಗೆ, ನಿನ್ನ ಪ್ರೀತಿಗೆ..

ಜರೂರಿದೆ ನಿನ್ನ ನಗೆಯ ಬೆಳಕು

ಡಾ ಶೋಭಾ ರಾಣಿ

ಮೊನ್ನೆ ಮೊನ್ನೆವರೆಗೂ ನೀ ಸುರಿಸಿದ ಪ್ರೀತಿಯ ಮಳೆಗೆ
ತೋಯ್ದು ತೊಪ್ಪೆಯಾಗಿದ್ದೆ ಒಳಗೊಳಗೆ
ಇಷ್ಟು ಬೇಗ ಬರಬೇಕಿತ್ತೆ ಬಿರುಬೇಸಿಗೆ, ನಿನ್ನ ಪ್ರೀತಿಗೆ
ಹೇ ಪ್ಲೀಸ್ ಬತ್ತದಿರಲಿ ನಿನ್ನ ಪ್ರೀತಿಯ ಒರತೆ
ಹುಡಕದಿರು ನನ್ನಲ್ಲಿ ಕೊರತೆ ……..

ಜರೂರಿದೆ ನಿನ್ನ ನಗೆಯ ಬೆಳಕು
ಶಕ್ತಿ ನೀಡಲು ನನ್ನ ದೇಹದ ಕಣ ಕಣಕೂ
ಬಡಿದೋಡಿಸಬೇಕಾಗಿದೆ ತುರ್ತಾ ಗಿ ನನ್ನ ಬಾಳಿನ ತಮಸ್ಸು
ಅದಕ್ಕಾಗಿ ನೀ ಮಾಡಬೇಕಿದೆ ಕೊಂಚ ಮನಸ್ಸು
 
ನಂಬು ಬಿಟ್ಟಿರಲಾರೆ ನಾ ನಿನ್ನ ಅರೆಗಳಿಗೆ
ನೀ ನಿಲ್ಲದೆ ಬೆಳಕೆಲ್ಲಿದೆ ಈ ಬಾಳಿಗೆ…
ಹೇ ಯಾರು ಏನಾದರೂ ಅಂದುಕೊಳ್ಳಲಿ
ನಾ ನಿನಗಷ್ಟೇ ಮೀಸಲು ಈ ಜನ್ಮದಲಿ

‍ಲೇಖಕರು avadhi

25 April, 2013

7 Comments

  1. bhavya

    dinesh sir neevu thumba lucky alva?

  2. girish

    “ಮೊನ್ನೆ ಮೊನ್ನೆವರೆಗೂ ನೀ ಸುರಿಸಿದ ಪ್ರೀತಿಯ ಮಳೆಗೆ
    ತೋಯ್ದು ತೊಪ್ಪೆಯಾಗಿದ್ದೆ ಒಳಗೊಳಗೆ
    ಇಷ್ಟು ಬೇಗ ಬರಬೇಕಿತ್ತೆ ಬಿರುಬೇಸಿಗೆ, ನಿನ್ನ ಪ್ರೀತಿಗೆ
    ಹೇ ಪ್ಲೀಸ್ ಬತ್ತದಿರಲಿ ನಿನ್ನ ಪ್ರೀತಿಯ ಒರತೆ
    ಹುಡಕದಿರು ನನ್ನಲ್ಲಿ ಕೊರತೆ ……..”
    Lovely 🙂

  3. Girish

    ಮೊನ್ನೆ ಮೊನ್ನೆವರೆಗೂ ನೀ ಸುರಿಸಿದ ಪ್ರೀತಿಯ ಮಳೆಗೆ
    ತೋಯ್ದು ತೊಪ್ಪೆಯಾಗಿದ್ದೆ ಒಳಗೊಳಗೆ
    ಇಷ್ಟು ಬೇಗ ಬರಬೇಕಿತ್ತೆ ಬಿರುಬೇಸಿಗೆ, ನಿನ್ನ ಪ್ರೀತಿಗೆ
    ಹೇ ಪ್ಲೀಸ್ ಬತ್ತದಿರಲಿ ನಿನ್ನ ಪ್ರೀತಿಯ ಒರತೆ
    ಹುಡಕದಿರು ನನ್ನಲ್ಲಿ ಕೊರತೆ ……..

  4. ಪ್ರಕಾಶ ಬಿ. ಜಾಲಹಳ್ಳಿ

    ”ಮೊನ್ನೆ ಮೊನ್ನೆವರೆಗೂ ನೀ ಸುರಿಸಿದ ಪ್ರೀತಿಯ ಮಳೆಗೆ
    ತೋಯ್ದು ತೊಪ್ಪೆಯಾಗಿದ್ದೆ ಒಳಗೊಳಗೆ
    ಇಷ್ಟು ಬೇಗ ಬರಬೇಕಿತ್ತೆ ಬಿರುಬೇಸಿಗೆ, ನಿನ್ನ ಪ್ರೀತಿಗೆ
    ಹೇ ಪ್ಲೀಸ್ ಬತ್ತದಿರಲಿ ನಿನ್ನ ಪ್ರೀತಿಯ ಒರತೆ
    ಹುಡಕದಿರು ನನ್ನಲ್ಲಿ ಕೊರತೆ ……..”
    ಪ್ರಾಸದಿಂದ ಕೂಡಿದ ಸಾಲುಗಳಿಂದಾಗಿ ಕವಿತೆ ಸೊಗಸಾಗಿದೆ…

  5. chalam

    ಇತ್ತೀಚೆಗೆ ಝೆನ್,ಹಾಯ್ಕು,ನೀಲು ಹೀಗೆ ಓದುತ್ತಾ ಅವುಗಳದೇ ಕಾಲ ಅನ್ನುವಂತಾಗಿರುವುದರಿಂದ ಪ್ರಾಸ ಸ್ವಲ್ಪ ತೊಂದರೆ ಕೊಟ್ಟಿತು.ಚೆಂದದ ಭಾವಗಳಲ್ಲಿ ಅರ್ಪಣೆ ಸೊಗಸಾಗಿದೆ.

  6. Parvathi.D.V

    ಚೆನ್ನಾಗಿದೆ ನಿನ್ನ ಕವಿತೆ ಶೋಭಾ……

  7. berlindervijayasheela

    ಶ್ರೀಮತಿ ಶೋಭ ರಾ!
    ನಿಮ್ಮ ಕವನ ಓದಿದಾಗ ಮನದೊಳೆನಗೂ
    ಕಾವ್ಯಧಿವ್ಯತೆಯ ಸಿರಿಭಾವಗಳ ಸೊಬಗು
    ವಿವಿಧ ರೂಪಾಲಂಕಾರಗಳ ಅಚ್ಚ ಸಿಂಗಾರ
    ಮನಕಾಕರ್ಷಿತ ಸಾಹಿತ್ಯರುಚಿಯ ವೈಯ್ಯಾರ!
    ಅಲೋಚನೆಗಳ ಅಡ್ರೆನಲೀನ್ ಚಿಮ್ಮುವುದು!
    ’ಮಹಾಪ್ರೀತಿ’ಯ ಸೊಗಸಾಗಿ ವರ್ಣಿಸಿರುವುದು!
    ಹಾರ್ದಿಕ ಶುಭಾಶಯಗಳು,
    ವಿಜಯಶೀಲ, ಬೆರ್ಲಿನ್, ೧೬.೧೦.೧೬.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading