ಕಳೆದು ಹೋಗಬೇಕಿದೆ ನಾನು…
– ವಿಶ್ವವಿನೂತನ
ಕಳೆದು ಹೋಗಬೇಕಿದೆ ನಾನು
ದೂರದ ಕಾಣದ ಊರಿನಲ್ಲಿ
ಇಷ್ಟದ ಪುಸ್ತಕದ ರಾಶಿಯಲ್ಲಿ…
ಮದುರ ಸುಮದರ ಗೀತೆಗಳಲ್ಲಿ
ನೂರಾರು ಭಾವನೆಗಳ ರೀತಿಗಳಲ್ಲಿ.
ಕಳೆದು ಹೋಗಬೇಕಿದೆ ನಾನು…
ಕಳೆದು ಹೋಗಬೇಕಿದೆ ನಾನು
ಭಯವಿರದ ಬಿಸಿಲಿರದ ಕಾಡಿನಲ್ಲಿ
ನೊವಿರದ ಅರಿಯದ ರಸ್ತೆಯಲ್ಲಿ
ನಾನು ನನ್ನ ಜೊತೆಗಿರುವ ರೀತಿಯಲ್ಲಿ
ಯಾರು ಅರಿಯದ ದೋಣಿಯಲ್ಲಿ
ಕಳೆದು ಹೋಗಬೇಕಿದೆ ನಾನು…
ಕಳೆದು ಹೋಗಬೇಕಿದೆ ನಾನು
ಮರಗಳ ನೆರಳಿನಲ್ಲಿ
ತಂಗಾಳಿ ಜೊತೆಯಲ್ಲಿ
ನದಿಯ ದಡದಲ್ಲಿ
ಅಕ್ಷರದ ಬರಹದಲ್ಲಿ
ಕಳೆದು ಹೋಗಬೇಕಿದೆ ನಾನು
ಕಳೆದು ಹೋಗಬೇಕಿದೆ ನಾನು
ನನ್ನದೇ ಬರವಣಿಗೆಯಲ್ಲಿ
ಯಾರು ಬೆರೆಯದ ರೀತಿಯಲ್ಲಿ
ಮುಂಜಾನೆಯ ಕಾಫಿಯಲ್ಲಿ
ಸಕ್ಕರೆ ಬೆರೆತ ರೀತಿಯಲ್ಲಿ
ಕಳೆದು ಹೋಗಬೇಕಿದೆ ನಾನು…






0 Comments