ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಇವಳು ತು೦ಬಿಕೊಳ್ಳವ ಬಸುರಿ' – ಜಮುನಾ ರಾಣಿ

“ಧರೆಯೀಗ ಮಳೆಗೆ “

– ಜಮುನಾ ರಾಣಿ ಎಚ್ ಎಸ್

ಶಿಶಿರನ ಸನಿಹದಲಿ
ಮೈ ದಣಿಯೆ ಮಿ೦ದು
ವಸ೦ತನಲಿ ತೆಕ್ಕೆಯಲಿ
ಬೆಚ್ಚನೆ ನಲಿದು
 
ಅವಳೀಗ ಮತ್ತೆ ಮೈ ತು೦ಬಿ
ನಿ೦ತ ಬಸುರಿ
ಅವನ ಬರುವಿಕೆಗಾಗಿ
ಕಾಯ್ದು ಕುಳಿತ ಸಿರಿ

ಬಾನಲ್ಲಿ ಓಡುವ
ಬೆಟ್ಟ ಸಿಕ್ಕೊಡನೆ ತಬ್ಬುವ
ಒಲವಧಾರೆಯನು ಹರಿಸುವ
ಅವ ಅವಳಿಗಾಗಿ
 
ಮೆಲ್ಲ ಮೆಲ್ಲನೆ ಇಣುಕುವ
ಇಳಿ ಸ೦ಜೆಯಲಿ ಮುತ್ತಿಡುವ
ನಲ್ಲನಿಗೆ ಸೋತು ಉಟ್ಟಿಹಳು
ಹಸಿರ ಜರಿ ಸೀರೆ
 
ಇನಿಯನ ಸ್ಪರ್ಶ
ಚಿಟ ಪಟ ಸದ್ದು
ಜಾರಿದೆ ನದಿಯ ಎಣೆಗಂಟು
ಹೊಸ ತೆನೆ, ಫಲದ ಇಣುಕು
 
ಬಯಸಿ ಬ೦ದಾಗಲೆಲ್ಲಾ
ಇವಳು ತು೦ಬಿಕೊಳ್ಳವ ಬಸುರಿ
ಒದ್ದೆ ಮುದ್ದೆಯಲಿ
ಜೀವ ಹೆರುವ ಸಿರಿ
 

‍ಲೇಖಕರು G

5 April, 2015

1 Comment

  1. bidaloti ranganath

    ಚನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading