ಹೀಗೊಂದು ಕವಿತೆ…
ಎಂ. ಸಿದ್ದು ಸತ್ಯಣ್ಣವರ
ಅವಳು ಅಳುತ್ತಾಳೆ
ಇವನು ನಗುತ್ತಾನೆ
ಅವಳು ಕ್ರೋಧದಿ ಕುದಿಯುತ್ತಿದ್ದಾಳೆ
ಈತ ನರಳುತ್ತಿದ್ದಾನೆ.
ಆ ಕಬ್ಬಿಣದ ಕಡ್ಡಿಗಳ ಮೇಲೆ ಗುರುತುಗಳಿವೆ
ಮಾಸಿ ಹೋಗುತ್ತವೆ
ಇವಳದೊಂದೆ ಕೊರಗು
ಕುರುಹು ಮರೆಯಾಗುವುದಿಲ್ಲ
ಹೆಣ್ಣಾಗಿದ್ದೆ ತಪ್ಪೇ?
ಮತ್ತೆ ಮತ್ತೆ ಕೇಳಿಕೊಂಡು ಮೆತ್ತಗಾಗಿದ್ದಾಳೆ





nice..kuruhu mareyaaguvudilla!!!!!!!