ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

`ಇಲ್ಲ, ಅವರು ಬರುತ್ತಿದ್ದಾರೆ, ಓಡು ಗೆಳತಿ ಓಡು’

ಇಲ್ಲೊಂದು ಕವಿತೆ ಇದೆ. ಅದೇ ಗಾಂಧಿಯ ಹುಟ್ಟೂರಿನ ಕವಿ ಅಶೋಕ್ ಗುಪ್ತಾ ಬರೆದದ್ದು. ಗುಜರಾತ್ ಕೋಮು ಗಲಭೆಯಲ್ಲಿ ನರಳುತ್ತಿದ್ದಾಗ ಬರೆದದ್ದು. ಗಾಂಧಿ ದಿನಕ್ಕಾಗಿ ‘ಕಳ್ಳ-ಕುಳ್ಳ’ ಬ್ಲಾಗ್ ನಿಂದ ಹೆಕ್ಕಿ ತರಲಾಗಿದೆ-

ಓಡು ಗೆಳತಿ ಓಡು
ಸತ್ತವರ ಆತ್ಮ ಖಂಡಿತ ಶಾಂತಿಯಿಂದಿಲ್ಲ,
ಬಹಳ ಮುಖ್ಯವಾಗಿ ರಾತ್ರಿ ಹೊತ್ತು.
ನನಗೆ ಎಷ್ಟೋ ಸಲ ಕೇಳುತ್ತದೆ,
ಅವನು ಮಹಡಿ ಮೇಲೆ ಹೋಗಿ
ಕೋಣೆ ಬಾಗಿಲು ಹಾಕಿಕೊಳ್ಳುತ್ತಾನೆ,
ಬಾಗಿನ್ನು ಯಾರೂ ತಳ್ಳಿ ಒಳಬರದಿರಲೆಂದು
ಮಂಚ, ಬೆಂಚುಗಳನ್ನು ಅಡ್ಡ ಇಡುತ್ತಾನೆ.
ಕೆಲವೊಮ್ಮೆ ಗಾಢ ಮೌನ,
ಸಿಡಿದು ಹಾರುವ ಬೆಂಕಿ, ಹೆಣ ಸುಟ್ಟ ವಾಸನೆ
ನೆನೆದು ಆ ಮೌನವನ್ನೂ ಒಡೆದು ಅರಚುತ್ತಾನೆ
`ಓಡು ಗೆಳತಿ ಓಡು’.
ನಾನವನನ್ನು ಸಮಾಧಾನಿಸುತ್ತೇನೆ-
`ವರ್ಷಗಳಾದವು ಗೆಳೆಯ ಅವರು ಹೋಗಿ.
ನನಗೇನೂ ಆಗಿಲ್ಲ,
ನೀನಂತೂ ಸತ್ತಾಗಿದೆ’.
ಆದರೂ ಅವನು ಕನವರಿಕೆಯಂತೆ ಕೂಗುತ್ತಾನೆ:
`ಇಲ್ಲ, ಅವರು ಬರುತ್ತಿದ್ದಾರೆ,
ಓಡು ಗೆಳತಿ ಓಡು’.

‍ಲೇಖಕರು avadhi

2 October, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading