ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇರುವುದು ಇಲ್ಲದಿರುವುದು..

ಕೃಷ್ಣ ದೇವಾಂಗಮಠ

ಕಣ್ಣುಗಳು ರೆಪ್ಪೆಗಳನ್ನು ಎಂದೂ
ಮರೆಯುವುದಿಲ್ಲವಾದ್ದರಿಂದ
ಅವು ಸದಾ ಕಾವಲಿದ್ದು ಕಾಯುತ್ತವೆ

 

ದೇವರನ್ನು ಸಂಪೂರ್ಣ
ಅಲ್ಲಗಳೆಯುವುದಿಲ್ಲವೆಂದು
ಯಾವುದೋ ಒಂದು ಶಕ್ತಿ ಸದಾ ಕಾಪಾಡುತ್ತದೆ

ಭೂಮಿಯು ಸದಾ ಆಗಸವನ್ನು
ನೋಡುತ್ತಲೇ ಪ್ರೀತಿಸುತ್ತದಾದ್ದರಿಂದ
ಮೋಡಗಳಿಂದ ಮಳೆ ಸುರಿಯುತ್ತದೆ

 

ತನ್ನನ್ನು ಜೀವಂತ ಉಳಿಸಲು
ಕೊನೆಯವರೆಗೂ ವಸ್ತು ಸುಟ್ಟುಕೊಳ್ಳುತ್ತದೆಂದೆ
ಬೆಂಕಿ ಸದಾ ಹೊತ್ತಿಕೊಳ್ಳುತ್ತದೆ

ಯಾವುದೋ ಕಾಲಕ್ಕೆ ಯಾರೋ ಉಪಯೋಗಕ್ಕಾದಾರೆಂದು
ಮನುಷ್ಯ ಪ್ರೀತಿಸುತ್ತಾನಾದುದಕ್ಕೆ
ಕೊಂಡಿ ಒಂದೊಂದೆ ಕಳಚಿಕೊಳ್ಳುತ್ತವೆ

‍ಲೇಖಕರು Avadhi

26 November, 2018

2 Comments

  1. ಆರ್ . ದಿಲೀಪ್ ಕುಮಾರ್ ಚಾಮರಾಜನಗರ

    ಬಹಳ ಅದ್ಭುತವಾದ ಕಾವ್ಯ ಕೃಷ್ಣ . ತುಂಬಾ ನವಿರಾದ ಅನುಭವವನ್ನ ಕೊಡುತ್ತಲೇ ಗಹನವಾದ ಆಲೋಚನೆಗೆ ತಳ್ಳುವಲ್ಲಿ ಕಾವ್ಯ ಯಶಸ್ವಿಯಾಗಿದೆ …

    ಶುಭಾಶಯಗಳು …

  2. Gubbachchi Sathish

    ವಾವ್!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading