ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇರುಳೊಂದಿತ್ತು..

sandeep eshanya

ಸಂದೀಪ್ ಈಶಾನ್ಯ

ಇರುಳೊಂದಿತ್ತು
ಯಾರಿಗೂ ನೋವಿಡದ ಸವೆದ ಚಪ್ಪಲಿಯ ಹಾಗೆ
ಚಪ್ಪಲಿ ಬಿಡು ಅದೊಂದು ಅನುಭವದ ಮೂಟೆ
ಅದಕ್ಕೆ ಕಲ್ಲು, ಮುಳ್ಳುಗಳ ಪರಿಚಯವಷ್ಟೇ ಅಲ್ಲ
ಅದರೊಂದಿಗೆ ಪ್ರೀತಿ ಮುನಿಸುಗಳು ಇವೆ
ಚಪ್ಪಲಿ ಸುಮ್ಮನೆ ಅಷ್ಟು ಸವೆದಿಲ್ಲ ಮಾರಾಯ
he2-1-370x315ಅದಕ್ಕೆ ಅದರದೇ ಆದ ಇತಿಹಾಸವಿದೆ
ಅದದೇ ರಸ್ತೆಯಲ್ಲಿ
ಖಾಲಿ ತಲೆಯ ಮನುಷ್ಯ
ಸಿಕ್ಕ ಸಿಕ್ಕಂತೆಲ್ಲಾ ಅಂಡಲೆದರೆ
ಚಪ್ಪಲಿಗೆ ಬೀದಿಯೊಂದಿಗೆ ಸಂಬಂಧವಿರಲಾರದೇನು
ಇದೆ
ಸಂಬಂಧ ಏರ್ಪಡುವುದೆಂದರೆ ಖಾಲಿ ತಲೆಯ ಮನುಷ್ಯನ
ಹಾಗೆ ಊರು ಹೆಸರು ವಿಳಾಸದ ಜೊತೆಗೆ ಕೇಳಿದ ಕತೆಗೆಲ್ಲ ಕುತ್ತಿಗೆ ಕುಣಿಸುವುದಲ್ಲ
ಅವಕಾಶ ಸಿಕ್ಕರೆ ರಮಿಸುವುದಲ್ಲ, ಸಿಟ್ಟಿಗೇಳುವುದಲ್ಲ
ಆಗಷ್ಟೇ ಹಾರುವುದ ಕಲಿತ ಬಲಿತ ಹಕ್ಕಿಯೊಂದು
ತಾನೇ ಪಂಜರವನ್ನು ಹುಡುಕಿ ಅಲೆಯುತ್ತದಲ್ಲ ಹಾಗೆ
ಹೇಳು
ಈ ಹಕ್ಕಿಗೆ ಪಂಜರದೊಂದಿಗೆ ಅದೇನು ಸಂಬಂಧ
ಸ್ವಾತಂತ್ರ್ಯವಾ, ಬಂಧನವಾ, ಬಿಡುಗಡೆಯಾ

‍ಲೇಖಕರು Admin

16 December, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading