ಸಂಬಂಧಗಳ ಕೊಂಡಿ ಕಳಚಿಕೊಂಡು…
ವೈ.ಬಿ.ಹಾಲಬಾವಿ
ದಿನ ಬೆಳಗಾದರೆ ರಕ್ತಸಿಕ್ತ ವರದಿ
ಪತ್ರಿಕೆ, ವಾಹಿನಿಗಳ ತುಂಬ ಸೂತಕ ಸುದ್ಧಿ…
ಬೆಚ್ಚಿ ಬೀಳಿಸುತ್ತವೆ ಕೆಟ್ಟಕನಸುಗಳು
ಹೊತ್ತಲ್ಲದ ಹೊತ್ತು ಅಪಶಕುನವೆಂಬಂತೆ…
ನಿದ್ದೆಯಿಲ್ಲದ ಕಣ್ಣುಗಳಲ್ಲಿ ನರಳುತ್ತವೆ ಮಹಲುಗಳು
ಪಹರೆ ತಿರುಗುತ್ತವೆ ಸೈತಾನಿ ಹೃದಯಗಳು
ಕ್ಷುದ್ರ ಗಳಿಗೆಗಳಲ್ಲಿ ನಗರಗಳು ನರಕವಾಗುತ್ತವೆ…
ಮುಪ್ಪಿನಲ್ಲೂ ವಿಕೃತ ಕಾಮ ಬಿದ್ದು ಹೋಗುವ ಮುದಿಮರ
ಕುಡಿಯೊಡೆದ ಮೊಳಕೆಗಳ ಹೊಸಕಿ ಹಾಕುತ್ತವೆ…
ಬಾಲ್ಯ ಕರಗುವ ಮುನ್ನವೇ ಬಸುರಿಯಾಗುತ್ತಾಳೆ ಬಾಲೆ
ಕ್ರೂರ ಕೃತ್ಯಕ್ಕೆ ಸಾಕ್ಷಿ ಬಿಕ್ಕಳಿಸುತ್ತದೆ ಬದುಕು
ಇರಿಯುತ್ತವೆ ಅವಳ ಕಣ್ಣ ಕಂಬನಿ ಹರಿತ ಚೂರಿಯಂತೆ…!
ಮಲೀನಗೊಂಡಿದೆ ಗುರು ಸ್ಥಾನ ಬೇಲಿಯೇ ಎದ್ದು ಹೊಲ ಮೇಯ್ದಂತೆ
ವಿಕೃತ ಮನಸ್ಸುಗಳ ಕಾಟಕ್ಕೆ ಜ್ಞಾನ ದೇಗುಲಗಳೂ ಪಾಪ ಕೂಪಗಳಾಗಿವೆ…
ತೆರೆದುಕೊಂಡಿವೆ ದೇವರ ಹೆಸರಿನಲ್ಲೂ
ಅನಾಚಾರದ ಮಾರ್ಗಗಳು ಕಳ್ಳ ಸನ್ಯಾಸಿಗಳ ಚೆಲ್ಲಾಟಕ್ಕೆ
ಧ್ಯಾನ, ಯೋಗ ಮಂದಿರಗಳೂ ಕಾಮ ಕೂಟದ ಅಡ್ಡೆಗಳಾಗಿವೆ…
ವ್ಯಭೀಚಾರಗೊಂಡಿದೆ ಮನಸ್ಸು ನೀತಿ, ನೈತಿಕತೆಯ ಹತ್ಯೆ ಮಾಡಿ
ತಂದೆ, ಮಗಳು, ಮಗ, ತಾಯಿ, ಹಿರಿಯ, ಕಿರಿಯ, ಗುರು, ಶಿಷ್ಯ
ಸಂಬಂಧಗಳ ಕೊಂಡಿ ಕಳಚಿಕೊಂಡು…!!







ತೆರೆದುಕೊಂಡಿವೆ ದೇವರ ಹೆಸರಿನಲ್ಲೂ
ಅನಾಚಾರದ ಮಾರ್ಗಗಳು ಕಳ್ಳ ಸನ್ಯಾಸಿಗಳ ಚೆಲ್ಲಾಟಕ್ಕೆ
ಧ್ಯಾನ, ಯೋಗ ಮಂದಿರಗಳೂ ಕಾಮ ಕೂಟದ ಅಡ್ಡೆಗಳಾಗಿವೆ…
ವ್ಯಭೀಚಾರಗೊಂಡಿದೆ ಮನಸ್ಸು ನೀತಿ, ನೈತಿಕತೆಯ ಹತ್ಯೆ ಮಾಡಿ
ತಂದೆ, ಮಗಳು, ಮಗ, ತಾಯಿ, ಹಿರಿಯ, ಕಿರಿಯ, ಗುರು, ಶಿಷ್ಯ
ಸಂಬಂಧಗಳ ಕೊಂಡಿ ಕಳಚಿಕೊಂಡು…!! tumbaa arthapurna haagu manakaaduva bhavanegalu….
nimma vimarshege dhanyavadagalu.
kavana chennaagide..haagu prastuta..!!!
vishaada madugattisuva kavana …
ನಿಮ್ಮೆಲ್ಲರ ಅಭಿಪ್ರಾಯಕ್ಕೆ ಧನ್ಯವಾದಗಳು…
ಅನಿಸಿಕೆ, ವಿಮರ್ಶೆಗೆ ಸದಾ ಸ್ವಾಗತ.