ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇರಬೇಕು ಒಬ್ಬಳೇ ಮಾತೇ ಮರೆತು ಹೋಗುವಂತೆ..

ವೈಶಾಲಿ ಹೆಗ್ಡೆ 

1.

ಹೊತ್ತೆಲ್ಲ ಹುತ್ತಗಟ್ಟಿ  ಬಿಮ್ಮನೆ ಕೂತಿದೆ
ಪೂರ್ವ ಪಶ್ಚಿಮಕೆಲ್ಲ ಗೋಜಲು ದಿಕ್ಕೇ ಹಾರಿ ಹೋಗಿದೆ
ಕ್ಷಿತಿಜ ಕೆಂಪಾಗುವುದ ಮರೆತು ಕೆದರುತ್ತ ಕಾದಿದೆ
butterfly ladyಊರಾಚೆ ರೈಲುಹಳಿ ನಿಂತಲ್ಲೇ ಓಡಿದೆ
ಕಳೆದುಹೋಗಿದೆ ಕಣ್ಣು ಒಣ ಒಣ ಚಳಿಯಲ್ಲಿ
ಕೈಬಿರುಕುಗಳ ಕೊರಕಲಿನಲ್ಲಿ

ಎದೆಯ ಹರಿವಾಣದ ತುಂಬ ಒದ್ದೆಜೇನು
ತುಳುಕಿ ತೊಟ್ಟಿಕ್ಕುವ ಹನಿಹನಿಯಲ್ಲಿ
ಹೊರಳಿ ಜಿಗುಟೆದ್ದು ಜಗ್ಗುವ ಸಿಹಿ
ನೆನಪಿಗಂಟಿ ಮುತ್ತುವ ಇರುವೆಸಾಲು
ಇಳಿದುಹೋಗಿದೆ ಅಲ್ಲೇ ಜೇನುರಟ್ಟಿನ ಬದಿಯಲ್ಲೇ
ಜೇನುಹೂಗಳ ಹೊಟ್ಟೆಯಲ್ಲೇ

2.

ಇರಬೇಕು ಒಬ್ಬಳೇ
ಕೂಗಿ ಕೂಗಿ ಕುಸಿದರೂ ಓಗೊಡುವರು ಇಲ್ಲದಂತೆ
ಮೌನ ಅನುರಣಿಸಿ ಮತ್ತೆ ಮತ್ತೆ ಕೇಳುವಂತೆ
ಹಗಲು ರಾತ್ರಿಗಳ ಲೆಕ್ಕ ತಪ್ಪಿ ಮಾಸ

ದ ನೆನಪೂ ಮಾಸುವಂತೆ
ನಾಳೆಗಳಿಗಾಗಿ ಇಂದೇ ಚಿಂತಿಸದಂತೆ
ಗೊತ್ತುಗುರಿಯ ಗಮನವಿಲ್ಲದದಂತೆ
ಹುಸಿನಿರೀಕ್ಷೆಯ ಹಂಗಿಲ್ಲದಂತೆ
ಇರಬೇಕು ಒಬ್ಬಳೇ

ಕಾನಮಧ್ಯೆಯ ಕೊಳದಲಿ ಕಲ್ಲೆಸೆದು ತೆರೆಯೆಬ್ಬಿಸಿ
ಕರಗಿ ಕಳೆದು ಹೋಗುವಂತೆ
ದರಕಿನೆಲೆಯ ಸರಗುಟ್ಟಿಸಿದರೂ ಇನ್ನಾರಿಗೂ ಕೇಳಿಸದಂತೆ
ಸುಳ್ಳು ಹೇಳುವ ಸುಳಿಗಾಳಿಗೂ ಸೊಪ್ಪು ಹಾಕದಂತೆ
ಚಿಗುರು ಟಿಸಿಲೊಡೆವ ಸದ್ದೂ ಗದ್ದಲವೆನಿಸುವಂತೆ
ಇರಬೇಕು ಒಬ್ಬಳೇ
ಮಾತೇ ಮರೆತು ಹೋಗುವಂತೆ

ಇರಬೇಕು ಒಬ್ಬಳೇ…

‍ಲೇಖಕರು admin

3 March, 2016

7 Comments

  1. ಶಮ, ನಂದಿಬೆಟ್ಟ

    ಇರಬೇಕು ಒಬ್ಬಳೇ
    ಮಾತೇ ಮರೆತು ಹೋಗುವಂತೆ

    ಆಹಾ… ನಿಮ್ಮಷ್ಟೇ ಚೆಂದದ ಕವಿತೆ

    • Anonymous

      ತುಂಬಾ ಚನ್ನಾಗಿದೆ. ಕವನ ಇನ್ನೊಮ್ಮೆ ಓದಬೇಕೆನಿಸುತ್ತದೆ.

  2. Suma

    Nanna manassige dhvani kottiri neevu!

  3. Nataraj

    Spellbounding

  4. padma bhat

    sakattaaagide…. thumba ishta aaytu.. irabeku obbale maathe maretu hoguvante -chandada saalu

  5. Anonymous

    ತುಂಬಾ ಚೆನ್ನಾಗಿದೆ….

  6. Ravi

    ಎದೆಯ ಹರಿವಾಣದ ತುಂಬ ಒದ್ದೆಜೇನು….
    ಇರಬೇಕು ಒಬ್ಬಳೇ
    ಮಾತೇ ಮರೆತು ಹೋಗುವಂತೆ…

    ತುಂಬಾ ಚೆನ್ನಾಗಿದೆ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading