ಹಿಂದೆ ದೊಡ್ಡಮ್ಮ ಹೇಳುತ್ತಿದ್ದ ಪ್ರವಾಸ ಕಥೆಗಳಲ್ಲಿ ಕಲ್ಯಾಣಪುರ ನದಿಯ ಹೆಸರು ಬಹಳಷ್ಟು ಬಾರಿ ಉಲ್ಲೇಖವಾಗುತ್ತಿತ್ತು. ಗಂಗೊಳ್ಳಿ,ಮಾಬುಕಳದ ಬಳಿಕ ಸಿಗುವ 3ನೇ ಕಳವಿನಬಾಗಿಲ ವಿವರಣೆ ಕೇಳಿದ್ದ ನನಗೆ, ಪೂರ್ವಜರ ರಸ್ತೆ ಹಾಗೂ ನದಿಗಳೆರಡನ್ನೂ ದಾಟುವ ಪ್ರವಾಸ ಸ್ಥಿತಿ ಊಹೆಗೂ ನಿಲುಕುತ್ತಿರಲಿಲ್ಲ. ಈ ಹಿನ್ನೆಲೆಯಿಂದ ವಿಶೇಷವಾಗಿ ಕಲ್ಯಾಣಪುರದ ನದಿ ನೋಡುವ ಬಯಕೆ ನೆಲೆ ಮಾಡಿತ್ತು. ಆದರೆ ಅದಕ್ಕೆ ಅವಕಾಶ ನಿನ್ನೆ ದೊರೆಯಿತು. . . ಹೌದು ಹಲವು ದೇವಾಲಯ ಚರ್ಚುಗಳ ಸಂಗಮದ ಆ ರಸ್ತೆಯ ಕೊನೆಯಲ್ಲಿ ತಲುಪುತ್ತಿದ್ದಂತೆ ಮುಂಜಾನೆಯ ಸೂರ್ಯ ಬೆಳಕು ನೀಡಿ ಆ ಸೌಂದರ್ಯ ಪರಿಚಯಿಸಿದ್ದ. . .”ಕಲ್ಯಾಣ “ಪುರದ ಹಿರಿಮೆ ವಿವರಿಸಿದ್ದ.
-ಓಂ ಗಣೇಶ್ ಕಾಮತ್

ಸೌಪರ್ಣಿಕೆ ಸಾಗರ ಸೇರುವ ತಾಣ. ಬೈಂದೂರು.ಸ್ನೇಹಿತರೊಂದಿಗೆ ರಂಗತರಬೇತಿ ನಡೆಸಲು ಬಂದೆ. ಸುರಭಿಯ ಸುಧಾಕರ ಹಾಗೂ ಯೋಗೇಶ ಜತೆಗಿದಾರೆ. ಮಕ್ಕಳಿಗೆ ಧರಣಿಮಂಡಲ, ದೊಡ್ಡವರಿಗೆ ಕಥಾಸಂಗಮ, ತೂದಳ್ಳಿ ಕುಣಬಿ ಜನಾಂಗದ ಬಾಂಧವರಿಗೆ ಚಾಕ್ ಸರ್ಕಲ್ ಹೀಗೆ ಮೂರು ನಾಟಕಗಳು. ಗಣೇಶ ಎಂ, ಪ್ರಥ್ವಿನ್, ಯತೀಶ್ ಜತೆಗಿದಾರೆ. ಅವರಬಲದಿಂದ ಕೋಲು ಮೇಸ್ತ್ರಿ ಕೆಲಸ ಮಾಡಿಕೊಂಡು ಇದೇನೆ. ಹೊರಗೆ ಧಗೆ. ಆದರೆ ಒಳಗೆ ತಂಪನೆಯ ಅನುಭವ.
-ಶ್ರೀಪಾದ್ ಭಟ್




0 Comments